ಷೇರು ಹೂಡಿಕೆ ಮೂಲಕವೇ ಕೋಟ್ಯಾಧಿಪತಿ ಆಗಿದ್ದ ರಾಕೇಶ್ ಝನ್ಝುನ್ವಾಲಾ (Rakesh Jhunjhunwala) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು 5 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಆಸ್ತಿಯ ಒಡೆಯರಾಗಿದ್ದರು. ಕಳೆದ 20 ವರ್ಷಗಳಲ್ಲಿ ಭಾರತೀಯ ಷೇರು ಪೇಟೆಯಲ್ಲಿ ಇವರದ್ದು ದೊಡ್ಡ ಹೆಸರು. ಷೇರ್ ಟೈಕೂನ್, ಬಿಗ್ ಬುಲ್, ವಾರೆನ್ ಬಫಟ್ ಆಫ್ ಇಂಡಿಯಾ ಎಂದೇ ಹೆಸರಾಗಿದ್ದರು.
ಇವರಿಗೆ 62 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳಿಂದ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇಂದು ಬೆಳಗಿನ ಜಾವ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಕಾರಣ ಮುಂಬೈನ್ ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೇ, ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕೆಲ ತಿಂಗಳ ಹಿಂದೆಯಷ್ಟೇ ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನೂ ಆರಂಭಿಸಿದ್ದರು.
ADVERTISEMENT
ADVERTISEMENT