ಹಿಂದಿ ನಟ ಅಕ್ಷಯ್ ಕುಮಾರ್ (Actor Akshay Kumar) ಅಭಿನಯದ ಹಿಂದಿ ಸಿನಿಮಾ ರಕ್ಷಾ ಬಂಧನ್ (Raksha Bandhan)
ಚಿತ್ರದ ಪ್ರದರ್ಶನವನ್ನು ಚಿತ್ರ ಬಿಡುಗಡೆ ಆದ ಎರಡನೇ ದಿನದಲ್ಲಿ ರದ್ದುಪಡಿಸಲಾಗಿದೆ.
ಬಿಡುಗಡೆ ಆದ ಎರಡನೇ ದಿನವೂ ಪ್ರೇಕ್ಷಕರ ಸಂಖ್ಯೆ ಶೇಕಡಾ 30ರಷ್ಟು ಕಡಿಮೆ ಆದ ಹಿನ್ನೆಲೆಯಲ್ಲಿ ಥಿಯೇಟರ್ಗಳು ಖಾಲಿ ಹೊಡೆದ ಹಿನ್ನೆಲೆಯಲ್ಲಿ ಪ್ರದರ್ಶನ ರದ್ದುಗೊಳಿಸಲಾಗಿದೆ.
ಈ ಮೂಲಕ ಅಕ್ಷಯ್ ಕುಮಾರ್ ನಟನೆಯ ಎರಡನೇ ಸಿನಿಮಾವೂ ಸತತ ಹೀನಾಯ ಸೋಲು ಕಂಡಿದೆ.
ರಕ್ಷಾ ಬಂಧನ ಸಿನಿಮಾದ ಎರಡನೇ ದಿನದ ಗಳಿಕೆ ಕೇವಲ 6 ಕೋಟಿ ರೂಪಾಯಿಯಷ್ಟೇ. ಬಿಡುಗಡೆ ಆದ ಮೊದಲ ದಿನ ಕೇವಲ 8.6 ಕೋಟಿ ರೂಪಾಯಿ ಗಳಿಸಿತ್ತು.
ಆ ಮೂಲಕ ಕೇವಲ 14 ಕೋಟಿ ರೂಪಾಯಿ ಗಳಿಸಿ ಸಿನಿಮಾ ಫ್ಲಾಪ್ (Flop) ಆಯಿತು.
ರಕ್ಷಾ ಬಂಧನ್ ಸಿನಿಮಾದ 1 ಸಾವಿರ ಶೋಗಳನ್ನು (cinema shows) ರದ್ದುಪಡಿಸಲಾಗಿದೆ.
ಸಿನಿಮಾವನ್ನು ಆನಂದ್ ಲಾಲ್ ರಾಯ್ (Anand Lal Rai) ನಿರ್ದೇಶಿಸಿದ್ದು ರಕ್ಷಾ ಬಂಧನ ದಿನದಂದು ಬಿಡುಗಡೆ ಮಾಡಲಾಗಿತ್ತು.
ADVERTISEMENT
ADVERTISEMENT