ಎಸ್ ಎಸ್ ಎಲ್ ಸಿ ಪರೀಕೆಯಲ್ಲಿ 625/625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಯುವ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಅವರು ಬೆಸ್ಟ್ ಫೌಂಡೇಷನ್ ವತಿಯಿಂದ ಸನ್ಮಾನಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ವಿದ್ಯಾರ್ಥಿಯಾಗಿರುವ ಮಚ್ಚಿನ ಗ್ರಾಮದ ನೆತ್ತರ ಶಿವಪ್ಪ ಪೂಜಾರಿ , ಹರೀಣಾಕ್ಷಿ ಇವರ ಮಗನಾದ ರೋಶನ್ ಹಾಗೂ ಸೈಂಟ್ ಮೇರೀಸ್ ಶಾಲೆ ಲಾಯಿಲ ಇಲ್ಲಿನ ವಿದ್ಯಾರ್ಥಿನಿ ರಾಮಣ್ಣಗೌಡ , ಗೀತಾ ಇವರ ಮಗಳು ಕುಮಾರಿ ಮಧುಶ್ರೀ ಇವರ ಮನೆಗೆ ಭೇಟಿ ನೀಡಿ ವಿಧ್ಯಾರ್ಥಿಗಳನ್ನು ಮನೆಯವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಯಿಂದ ತಾಲೂಕಿನ ಘನತೆ, ಗೌರವ ಹೆಚ್ಚಿದೆ. ವಿಧ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಾಯ , ಸಹಕಾರ ನೀಡುವುದಾಗಿ ರಕ್ಷಿತ್ ಶಿವರಾಂ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ , ಶ್ರೀಧರ್ ಮಡಿವಾಳ ಮಚ್ಚಿನ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.