ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ನಿಜವಾದ ಫೋಟೋಗಳು ಬಹಿರಂಗಗೊಂಡಿವೆ. ಈ ಇಬ್ಬರು ಆರೋಪಿಗಳು ಶಿವಮೊಗ್ಗದವರು ಎಂದು ಹೇಳಲಾಗಿದೆ.
ಇಬ್ಬರೂ ಆರೋಪಿಗಳು ಶಿವಮೊಗ್ಗದ ಐಸಿಸ್ ಮಾಡ್ಯೂಲ್ ನೊಂದಿಗೆ ಸಂಬಂಧ ಹೊಂದಿದ್ದು, ಈ ಹಿಂದೆಯೂ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಶಜೀಬ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು ಎನ್ನಲಾಗಿದೆ.
ಇದಲ್ಲದೇ ಎರಡನೇ ಆರೋಪಿ ಅಬ್ದುಲ್ ಮಥೇರನ್ ತಾಹಾ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದಾನೆ. ಸ್ಫೋಟದ ಮೊದಲು ಅವರ ಚಲನವಲನಗಳನ್ನು ಪರಿಶೀಲಿಸಿದ ಎನ್ ಐಎ ಮೂಲಗಳು, ಇವರಿಬ್ಬರು ಚೆನ್ನೈನ ಟ್ರಿಪ್ಲಿಕೇನ್ ನ ಲಾಡ್ಜ್ ನಲ್ಲಿ ಉಳಿದುಕೊಂಡು, ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಚು ರೂಪಿಸ್ದ್ದರು. ಅದರಂತೆ ಬೆಂಗಳೂರಿಗೆ ಬಂದು ಕೆಫೆ ಬಾಂಬ್ ಇಟ್ಟು ಮರಳಿ ಚೆನ್ನೈಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.