ಮಾರ್ಚ್ 1 ರಂದು ಬಾಂಬ್ ಸ್ಪೋಟ ನಡೆದ ಬಳಿಕ ಮುಚ್ಚಿದ್ದ ರಾಮೇಶ್ವರಂ ಕೆಫೆ ಮತ್ತೆ ಮಾರ್ಚ್ 9ರಂದು ತೆರೆಯಲಿದೆ. ಬಾಂಬ್ ಸ್ಫೋಟದಿಂದ ಹೋಟೆಲ್ ಗೆ ಏನು ತೊಂದರೆಯಾಗಿಲ್ಲ. ಹೋಟೆಲ್ನಿಂದ ಯಾವುದೇ ತಪ್ಪು ಆಗಿಲ್ಲ. ಹೀಗಾಗಿ ಅತಿ ಶೀಘ್ರದಲ್ಲಿ ಮತ್ತೆ ಹೋಟೆಲ್ ತೆರೆಯಲಾಗುವುದು ಎಂದಿದ್ದರು.
ಇದೀಗ ರಾಮೇಶ್ವರಂ ಕೆಫೆನಲ್ಲಿ ರೀನೋವೇಶನ್ ಕಾರ್ಯ ಶುರುವಾಗಿದ್ದು, ಶನಿವಾರ ಬೆಳಗ್ಗೆ 6:30 ಕ್ಕೆ ರಿಓಪನ್ ಮಾಡಲಾಗುವುದು ಎಂದು ಫ್ಲೆಕ್ಸ್ ಹಾಕಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕೂಡಾ ಪರಿಶೀಲನೆ ನಡೆಸಿದ್ದು, ಕೆಫೆಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಅದಾದ ಬಳಿಕ ಈಗ ಒಳಗಿನಿಂದ ದುರಸ್ತಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಹೀಗಾಗಿ ಮಾರ್ಚ್ 9ರ ಬೆಳಗ್ಗೆ 6.30ರಿಂದ ಮತ್ತೆ ಹೋಟೆಲ್ ತೆರೆದುಕೊಳ್ಳಲಿದೆ.
ಕಳೆದ ಶುಕ್ರವಾರ(ಮಾರ್ಚ್ 1) ಮಧ್ಯಾಹ್ನ ಬೆಂಗಳೂರಿನ ಜನನಿಬಿಡ ರಾಮೇಶ್ವರಂ ಕೆಫೆ ರೆಸ್ಟೋರೆಂಟ್ನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ. ರಾಮೇಶ್ವರಂ ಕೆಫೆ ಬ್ರೂಕ್ಫೀಲ್ಡ್ ಔಟ್ಲೆಟ್ ಸುಮಾರು ಒಂದು ವರ್ಷ ಮತ್ತು ಮೂರು ತಿಂಗಳ ಹಳೆಯದಾಗಿದೆ. ರಾಮೇಶ್ವರಂ ಕೆಫೆ ಇಂದಿರಾನಗರ, ಜೆಪಿ ನಗರ ಮತ್ತು ರಾಜಾಜಿನಗರ ಸೇರಿದಂತೆ ಬೆಂಗಳೂರಿನ ಇತರ ಮೂರು ಸ್ಥಳಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಬ್ರೂಕ್ಫೀಲ್ಡ್ ಔಟ್ಲೆಟ್ 150 ಉದ್ಯೋಗಿಗಳನ್ನು ಹೊಂದಿದೆ.