ADVERTISEMENT
ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮಮಂದಿರದ ಹೊಸ ಚಿತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದೆ. ರಾಮಮಂದಿರದ ಮೊದಲ ಅಂತಸ್ತಿನ ನಿರ್ಮಾಣ ಮುಕ್ತಾಯವಾಗಿದೆ, ಎರಡನೇ ಅಂತಸ್ತಿನ ನಿಮಾರ್ಣ ಅಕ್ಟೋಬರ್ನಲ್ಲೂ, ಮೂರನೇ ಅಂತಸ್ತು ಡಿಸೆಂಬರ್ನಲ್ಲೂ ಪೂರ್ಣವಾಗಲಿದೆ.
ಮುಂದಿನ ವರ್ಷದ ಜನವರಿ 15ರಿಂದ 24ರ ನಡುವೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.
2.7 ಎಕರೆ ವೀಸ್ತೀರ್ಣದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ 360 ಅಡಿ ಉದ್ದ ಮತ್ತು 161 ಅಡಿ ಎತ್ತರ ಮತ್ತು 235 ಅಡಿ ಅಗಲವಿರಲಿದೆ.
ರಾಮಮಂದಿರದಲ್ಲಿ ಮೂರು ಅಂತಸ್ತುಗಳಿದ್ದು, ಮೂರು ಅಂತಸ್ತುಗಳ ನಡುವಿನ ಅಂತರ 20 ಅಡಿ.
ದೇವಸ್ಥಾನದ ಕೆಳಭಾಗದಲ್ಲಿ 160 ಕಂಬಗಳು, ಎರಡನೇ ಅಂತಸ್ತಿನಲ್ಲಿ 152 ಕಂಬಗಳು ಮತ್ತು ಮೂರನೇ ಅಂತಸ್ತಿನಲ್ಲಿ 74 ಕಂಬಗಳಿರಲಿವೆ.
ರಾಮಮಂದಿರಕ್ಕೆ 12 ದ್ವಾರಗಳಿರಲಿವೆ.
70 ಎಕರೆ ವೀಸ್ತೀರ್ಣದಲ್ಲಿ ರಾಮಕುಂಡ, ಕರ್ಮ ಕ್ಷೇತ್ರ, ಹನುಮಾನ್ ಗಾದಿ, ಶ್ರೀ ರಾಮ್ಲಾಲ್ ಪೂರ್ವಕಾಲಿಕ ದರ್ಶನ ಮಂಡಲ, ಶ್ರೀ ರಾಮಕೀರ್ತಿ ಹೆಸರಲ್ಲಿ ಪ್ರಾರ್ಥನಾ ಮಂದಿರ, ಗುರು ವಸಿಷ್ಠ ಪೀಠಿಕಾ, ಭಕ್ತಿ ಟೀಲಾ (ಧ್ಯಾನ ಕೇಂದ್ರ), ತುಳಸಿ (ಬಯಲು ರಂಗ ಮಂದಿರ) ರಾಮ ದರ್ಬಾರ್ (ಪ್ರವಚನ ಮಂದಿರ), ಮಾತಾ ಕೌಶಲ್ಯ ವಾತ್ಸಲ್ಯ ಮಂಟಪ (ವಸ್ತುಪ್ರದರ್ಶನ ಕೇಂದ್ರ), ರಾಮಧ್ಯಾನ (ಸಾಕ್ಷ್ಯ ಚಿತ್ರ ಪ್ರದರ್ಶನ ಕೇಂದ್ರ), ಮಹರ್ಷಿ ವಾಲ್ಮೀಕಿ (ಸಂಶೋಧನಾ ಕೇಂದ್ರ), ರಾಮಾಶ್ರಯಂ ( ಹೊರಗಿನ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ), ಶ್ರೀ ದಶರಥ (ಗೋ ಶಾಲೆ), ಲಕ್ಷ್ಮಣ್ ವಾಟಿಕ (ಕೊಳ) ಲವ ಕುಶ ನಿಕುಂಜ್ (ಯುವಕರಿಗೆ ಚಟುವಟಿಕೆ ಕೇಂದ್ರ), ಮರ್ಯಾದ ಖಾಂಡ್ (ವಿಶೇಷ ಅತಿಥಿಗಳು ತಂಗುವ ಸ್ಥಳ), ಭಾರತ್ ಪ್ರಸಾದ ಮಂಟಪ (ಪ್ರಸಾದ ವಿತರಣೆ ಕೇಂದ್ರ), ಮಾತಾ ಸೀತಾ ರಸೋಯಿ ಅನ್ನಕ್ಷೇತ್ರ (ಅನ್ನ ಸಂತರ್ಪಣೆ ಸ್ಥಳ) ನಿರ್ಮಾಣವಾಗುತ್ತಿದೆ.
ADVERTISEMENT