ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಪಿಎಫ್ಐ ಸದಸ್ಯರಾಗಿರುವ 15 ಮಂದಿ ಅಪರಾಧಿಗಳಿಗೆ ಕೇರಳದ ಕೆಳ ಹಂತದ ನ್ಯಾಯಾಲದ ಮರಣದಂಡನೆ ವಿಧಿಸಿದೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಗಳು:
ನೈಸಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸಫ್ರುದ್ದೀನ್, ,ಮನ್ಶದ್, ಜಸೀಬ್ ರಾಜಾ, ನವಾಸ್, ಸಮೀರ್, ನಾಸೀರ್, ಝಾಕಿರ್ ಹುಸೈನ್, ಶಾಜಿ ಪೂವತುಂಗಲ್, ಶೆರ್ನಾಸ್ ಅಶ್ರಫ್.
ಮವೆಲಿಕ್ಕರ ಜಿಲ್ಲಾ ಹೆಚ್ಚುವರಿ ಸೆಷನ್ ಕೋರ್ಟ್ ನ್ಯಾಯಾಧೀಶೆ ಶ್ರೀದೇವಿ ವಿ ಜಿ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಕೇರಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮತ್ತು ವಕೀಲರು ಆಗಿದ್ದ ರಂಜಿತ್ ಶ್ರೀನಿವಾಸ್ ಅವರನ್ನು ಎರಡು ವರ್ಷದ ಹಿಂದೆ ಡಿಸೆಂಬರ್19, 2021ರಲ್ಲಿ ಕೊಲೆ ಮಾಡಲಾಗಿತ್ತು.
ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಈ 15 ಮಂದಿ ಅಪರಾಧಿಗಳೂ ರಾಜಕೀಯ ಪಕ್ಷ ಎಸ್ಡಿಪಿಐನ ಸಹವರ್ತಿ ಸಂಘಟನೆ ಈಗ ನಿಷೇಧಕ್ಕೊಳಗಾಗಿರುವ ಪಿಎಫ್ಐನ ಕಾರ್ಯಕರ್ತರು.
ಡಿಸೆಂಬರ್ 19ರಂದು ರಂಜಿತ್ ಮನೆಗೆ ನುಗ್ಗಿದ್ದ 15 ಮಂದಿಯೂ ಕೊಲೆ ಮಾಡಿದ್ದರು. ರಂಜಿತ್ ಕೊಲೆಯನ್ನು ಹಿಂದಿನ ದಿನ ನಡೆದಿದ್ದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಕೊಲೆಯ ಪ್ರತೀಕಾರ ಎಂದು ಪರಿಗಣಿಸಲಾಗಿತ್ತು.