ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್(Ranveer Singh) ಅವರು ಬೆತ್ತಲೆ ಫೊಟೋಶೂಟ್(Naked Photos) ಮಾಡಿಸಿಕೊಂಡು ಸಾಕಷ್ಟು ಚರ್ಚೆಗೀಡಾಗಿದ್ದರು. ಇದೀಗ, ಅವರ ವಿರುದ್ಧ ದೂರು ದಾಖಲಿಸಲಾಗಿದೆ(Case Registred).
ಬಾಲಿವುಡ್ ನಟ ಹಾಗೂ ಕರ್ನಾಟಕದ ಅಳಿಯನಾಗಿರುವ ರಣವೀರ್ ಸಿಂಗ್(Ranveer Singh) ಸದಾ ತನ್ನ ವಿನೂತನ ಸ್ಟೈಲ್ನಿಂದಲೇ ಪ್ರಸಿದ್ದಿಯಾಗಿದ್ದರು. ಆದರೆ, ಇದೀಗ ಅವರ ವಿನೂತನ ಪ್ರಯತ್ನ ವಿವಾದಕ್ಕೀಡಾಗಿದೆ ಅಲ್ಲದೇ ಸಮಾಜದ ಸ್ವಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ನಟ ರಣವೀರ್ ಸಿಂಗ್(Ranveer Singh) ಬೆತ್ತಲೆ ಪೋಟೋಶೂಟ್(Naked Photos) ಮಾಡಿಸಿಕೊಂಡಿದ್ದರು. ಆ ಫೋಟೋಸ್ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದರು. ಆದರೆ, ಈ ಫೋಟೋಸ್ ಬಿಡುಗಡೆಯಾದ ಬೆನ್ನಲ್ಲೇ, ಅವರ ಅಭಿಮಾನಿಗಳೂ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ, ನಟ ರಣವೀರ್ ಸಿಂಗ್ ಅವರ ಮೇಲೆ ಮುಂಬೈನಲ್ಲಿರುವ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಿದೆ. ವೈಯಕ್ತಿಕ ಸ್ವಾತಂತ್ರ್ಯದ ಮೂಲಕ ನಟರು ಸಮಾಜದ ಸ್ವಾಸ್ಥ್ಯ ಹಾಳುಮಾಡುವುದನ್ನು ನಿರ್ಭಂಧಿಸಬೇಕು. ರಣವೀರ್ ಅವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅವರು ತಮ್ಮ ಅಭಿಮಾನಿಗಳ ಕ್ಷಮೆಯಾಚಿಸಬೇಕು ಎಂದು ಶ್ಯಾಮ್ ಮಂಗರಮ್ ಪೌಂಡೇಶನ್ ನೀಡಿದ ದೂರಿನಲ್ಲಿ ಹೇಳಲಾಗಿದೆ.
View this post on Instagram
ನಟ ರಣವೀರ್ ಅವರ ಬೆತ್ತಲೆ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಈ ಬೆನ್ನಲ್ಲೇ, ಪತ್ನಿ ದೀಪಿಕಾ ಪಡುಕೋಣೆ ಈ ಫೋಟೋಶೂಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು, ನಟ ರಣವೀರ್ ಅವರು ಈ ಫೋಟೋಶೂಟ್ ಅನ್ನು ಪೀಪಲ್ಸ್ ಮ್ಯಾಗ್ಜಿನ್ ನ ಕವರ್ ಪೋಟೋಗಾಗಿ ಮಾಡಿಸಿದ್ದರು.