ಬಂದ್ರಾ ಏರಿಯಾ ಮುಂಬೈನ ಅತಿ ಹೆಚ್ಚಿನ ದುಬಾರಿ ಏರಿಯಾವಾಗಿದೆ. ಇಲ್ಲಿ ನಟ ಶಾರೂಖ್ ಕಾನ್ ಸೇರಿದಂತೆ ಹಲವು ಬಾಲಿವುಡ್ ನಟರ ಮನೆಗಳಿವೆ.
ಇದೀಗ, ವರದಿಗಳ ಪ್ರಕಾರ ರಣವೀರ್ ಸಿಂಗ್ ಅವರು ಅವರ ತಂದೆಯ ಜೊತೆ ಶಾರೂಖ್ ಖಾನ್ ಅವರ ಮನ್ನತ್ ಮನೆಯ ಹತ್ತಿರ ಟವರ್ ಒಂದರಲ್ಲಿ ಪ್ಲ್ಯಾಟ್ ಖರೀದಿಸಿದ್ದಾರೆ.
ಓ ಫೈವ್ ಓ ಮೀಡಿಯಾದ ಸಮುದ್ರಡೆಡೆಗೆ ಮುಖ ಮಾಡಿರುವ ಟವರ್ನಲ್ಲಿ 4 ಅಂತಸ್ತಿನ ಪ್ಲ್ಯಾಟ್ ಖರೀದಿ ಮಾಡಲಾಗಿದೆ. ಇದರ ಬೆಲೆ ಬರೋಬ್ಬರಿ 119 ಕೋ.ರೂ.ಗಳಾಗಿದೆ ಎಂದು ವರದಿಯಾಗಿದೆ.
ರಣವೀರ್ ಅವರು ಟವರ್ನ 16,17,18 ಮತ್ತು 19 ನೇ ಅಂತಸ್ತಿನ ಪ್ಲ್ಯಾಟ್ ಖರೀದಿಸಿದ್ದಾರೆ. ಪ್ರೀಮಿಯಂ ಆಸ್ತಿಯು ಒಟ್ಟು 11,266 ಚದರ ಅಡಿ ಕಾರ್ಪೆಟ್ ಏರಿಯಾ ಮತ್ತು 1,300 ಚದರ ಅಡಿ ವಿಶೇಷ ಟೆರೇಸ್ ಅನ್ನು ಹೊಂದಿದೆ. .
2021 ರಲ್ಲಿ ರಣವೀರ್ ಸಿಂಗ್ ಮತ್ತು ಪತ್ನಿ ದೀಪಿಕಾ ಪಡುಕೋಣೆಯವರು ಮುಂಬೈನ ಅಲಿಬಾಗ್ನಲ್ಲಿ 22 ಕೋ. ರೂ ಬೆಲೆ ಬಾಳುವೆ ಬಂಗಲೆ ಖರೀದಿಸಿದ್ದರು.