ADVERTISEMENT
30 ವರ್ಷದ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪದಡಿ ದೈತ ಉದ್ಯಮಿ 64 ವರ್ಷದ ಸಜ್ಜನ್ ಜಿಂದಾಲ್ ಮೇಲೆ ಎಫ್ಐಆರ್ ದಾಖಲಾಗಿದೆ.
ಮುಂಬೈನ ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
30 ವರ್ಷದ ಮಹಿಳೆ ವೈದ್ಯೆಯಾಗಿದ್ದು ಜೊತೆಗೆ ಮಾಡೆಲಿಂಗ್ ಕೂಡಾ ಮಾಡಿದ್ದರು ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಜೆಎಸ್ಡಬ್ಲ್ಯೂ ಕಂಪನಿ ಮುಖ್ಯಸ್ಥರಾಗಿರುವ ಸಜ್ಜನ್ ಜಿಂದಾಲ್ ವಿರುದ್ಧ ಐಪಿಸಿ ಕಲಂಗಳಾದ 376 (ಅತ್ಯಾಚಾರ), 354 (ಮಹಿಳೆಯ ಘನತೆಗೆ ಧಕ್ಕೆ ತರುವ ಸಲುವಾಗಿ ನಡೆಸಲಾದ ಹಲ್ಲೆ) ಮತ್ತು 503ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
2021ರಲ್ಲಿ ದುಬೈನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಮೊದಲ ಬಾರಿಗೆ ಆಕೆ ಜಿಂದಾಲ್ರನ್ನು ಭೇಟಿಯಾಗಿದ್ದರು. ಆ ಭೇಟಿಯ ಬಳಿಕ ನಡೆದ ಹಲವು ಭೇಟಿಗಳ ವೇಳೆ ಜಿಂದಾಲ್ ತನ್ನ ಮೇಲೆ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದರು.
ಅಕ್ಟೋಬರ್ಗ್ 2021ರಿಂದ ಜನವರಿ 2022ರವರೆಗೆ ಆ ರೀತಿ ಹಲವು ಭೇಟಿಗಳು ನಡೆದವು. ಕಳೆದ ವರ್ಷದ ಜನವರಿ 24ರಲ್ಲಿ ಜೆಎಸ್ಡಬ್ಲ್ಯೂನ ಮುಖ್ಯ ಕಚೇರಿಯಲ್ಲಿ ಜಿಂದಾಲ್ ಅವರು ತಮ್ಮನ್ನು ಮದುವೆ ಆಗುವ ಭರವಸೆ ನೀಡಿದ್ದರು ಎಂದು ಆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಜಿಂದಾಲ್:
ಎಫ್ಐಆರ್ ದಾಖಲಾದ ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಂದಾಲ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಇವೆಲ್ಲವೂ ಸುಳ್ಳು ಆರೋಪ, ತನಿಖೆ ನಡೆಯುತ್ತಿರುವ ಕಾರಣ ಪ್ರತಿಕ್ರಿಯೆ ಕೊಡಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.
ಜೆಎಸ್ಡಬ್ಲ್ಯೂ ಗ್ರೂಪ್ನ ಮೌಲ್ಯ 1 ಲಕ್ಷದ 80 ಸಾವಿರ ಕೋಟಿ ರೂಪಾಯಿ.
ADVERTISEMENT