ರಾಜಸ್ಥಾನದಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ರಜಪೂತ ಕಾರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜೈಪುರನಲ್ಲಿರುವ ಮನೆಯಲ್ಲೇ ಸುಖ್ದೇವ್ ಸಿಂಗ್ ಗೋಗಮೆಡಿಯನ್ನು ಹತ್ಯೆ ಮಾಡಲಾಗಿದೆ.
ಗೋಗಮೆಡಿ ಮನೆಯಲ್ಲಿದ್ದಾಗಲೇ ನುಗ್ಗಿದ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿಯಲ್ಲಿ ಸುಖ್ದೇವ್ ಸಿಂಗ್ ಗೋಗಮೆಡಿ ಸಹಚರರೂ ಗಾಯಗೊಂಡಿದ್ದಾರೆ.
೨೦೧೫ರಲ್ಲಿ ಕಾರ್ಣಿ ಸೇನಾದಿಂದ ಬೇರ್ಪಟ್ಟಿದ್ದ ಸುಖ್ದೇವ್ ತನ್ನದೇ ಸಂಘಟನೆಯನ್ನು ಕಟ್ಟಿಕೊಂಡಿದ್ದ. ಬಾಲಿವುಡ್ ಸಿನಿಮಾ ಪದ್ಮಾವತ್ ವಿರುದ್ಧವೂ ಈತ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ.