No Result
View All Result
ಇಂಗ್ಲೀಷ್ ಸುದ್ದಿವಾಹಿನಿ ಟೈಮ್ಸ್ ನೌ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಅವರು ಟೈಮ್ಸ್ ನೌ ಚಾನೆಲ್ಗೆ ವಿದಾಯ ಹೇಳಿದ್ದಾರೆ.
ತಮ್ಮ ಟ್ವಿಟ್ಟರ್ ಬಯೋದಲ್ಲೂ ಕೂಡಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನ ಸಂಪಾದಕ, ಟೈಮ್ಸ್ ನೌ 2016ರಿಂದ 2023ರವರೆಗೆ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಶಿವಶಂಕರ್ ಅವರು ಟೈಮ್ಸ್ ನೌಗೆ ವಿದಾಯ ಹೇಳಿರುವ ಬಗ್ಗೆ ನ್ಯೂಸ್ಲಾಂಡ್ರಿ ವೆಬ್ಸೈಟ್ ವರದಿ ಮಾಡಿದೆ.
2016ರವರೆಗೆ ನ್ಯೂಸ್ ಎಕ್ಸ್ ಪ್ರಧಾನ ಸಂಪಾದಕರಾಗಿದ್ದ ರಾಹುಲ್ ಶಿವಶಂಕರ್ ಅವರು ಬಳಿಕ ಟೈಮ್ಸ್ ನೌ ಸೇರಿಕೊಂಡರು.
ಟೈಮ್ಸ್ ನೌನಲ್ಲಿ ನ್ಯೂಸ್ ಅವರ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
ರಾಹುಲ್ ಶಿವಶಂಕರ್ ರಾಜೀನಾಮೆ ಕಾರಣದಿಂದ ಗ್ರೂಪ್ ಎಡಿಟರ್ ನಾವಿಕ ಕುಮಾರ್ ಅವರಿಗೆ ಚಾನೆಲ್ನ ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ.
No Result
View All Result
error: Content is protected !!