ಆರ್ಸಿಬಿ ತಂಡದಿAದ ತಮ್ಮನ್ನು ಕೈಬಿಟ್ಟಿರುವ ಬಗ್ಗೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಈಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಚಹಾಲ್,
`ಆರ್ಸಿಬಿಯಲ್ಲಿ ಮುಂದುವರಿಯಲು ನನಗೆ ಇಷ್ಟ ಇದ್ಯೋ ಇಲ್ಲವೋ ಎಂದು ಅವರು (ಆರ್ಸಿಬಿ) ಕೇಳಲಿಲ್ಲ ಅಥವಾ ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವರಿಗೆ ಇಷ್ಟ ಇದ್ಯೋ ಇಲ್ಲವೋ ಎಂದೂ ಕೇಳಲಿಲ್ಲ. ಅವರು ಮೂವರು ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆಯಷ್ಟೇ ಹೇಳಿದರು ಮತ್ತು ನನ್ನ ಬಗ್ಗೆ ಹರಾಜು ಪ್ರಕ್ರಿಯೆಯಲ್ಲಿ ನಿರ್ಧರಿಸುವುದಾಗಿ ಹೇಳಿದರು.
ನಾನು ಅವರ ಬಳಿ ಹಣದ ಬಗ್ಗೆ ಕೇಳಲೂ ಇಲ್ಲ, ಅವರೂ ನನಗೆ ಯಾವುದೇ ಆಫರ್ ಕೊಡಲಿಲ್ಲ. ಆದರೆ ನಾನು ಆರ್ಸಿಬಿ ಅಭಿಮಾನಿಗಳಿಗೆ ಸದಾ ಋಣಿ’ ಆಗಿರುತ್ತೇನೆ ಎಂದು ಹೇಳಿದ್ದಾರೆ.