ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡದ ನೂತನ ನಾಯಕನಾಗಿ ‘ಪಾಪ್ ಡು ಪ್ಲೆಸಿಸ್’ ಆಯ್ಕೆಯಾಗಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟಿ-20 ಕ್ರಿಕೇಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಆರ್ಸಿಬಿ ತಂಡದ ನಾಯಕತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಪಾಪ್ ಡು ಪ್ಲೆಸಿಸ್(37) ಆಯ್ಕೆಯಾಗಿದ್ದಾರೆ.
ಮುಂದಿನ ಐಪಿಎಲ್ ಆಟಗಳಲ್ಲಿ ಪಾಪ್ ಡು ಪ್ಲೆಸಿಸ್ ಆರ್ಸಿಬಿ ತಂಡವನ್ನು ಮುನ್ನೆಡೆಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿದ್ದ ಪಾಪ್ ಡು ಪ್ಲೆಸಿಸ್ ಅನ್ನು ಆರ್ಸಿಬಿ ತಂಡ ಇತ್ತೀಚೆಗೆ ನಡೆದ ಬಿಡ್ಡಿಂಗ್ನಲ್ಲಿ 7 ಕೋಟಿ ರೂ.ಗಳಿಗೆ ಖರೀದಿಸಿತ್ತು.
ಆರ್ಸಿಬಿ ತಂಡ 2022 ರ ಐಪಿಎಲ್ ಅನ್ನು ಮಾರ್ಚ್ 27 ರಂದು ಪಂಜಾಬ್ ವಿರುದ್ಧ ಮುಂಬೈನ ಡಿವೈ ಕ್ರೀಡಾಂಗಣದಲ್ಲಿ ಆಡಲಿದೆ.