ಕಡಿಮೆ ಆದಂತೆಯೇ ಆಗಿ ರಿಟೇಲ್ ಹಣದುಬ್ಬರ ಮತ್ತೆ ಹೆಚ್ಚಾಗಿದೆ. ಆಗಸ್ಟ್ನಲ್ಲಿ ಸಿಪಿಐ ಹಣದುಬ್ಬರ ಶೇಕಡಾ 7ರಷ್ಟು ನಮೂದಾಗಿದೆ.
ಆಹಾರ ಪದಾರ್ಥಗಳ ಬೆಲೆ ಅಧಿಕವಾಗಿ ಇರುವುದರಿಂದ ಜುಲೈನಲ್ಲಿ 6.71ರಷ್ಟಿದ್ದ ಹಣದುಬ್ಬರ ಆಗಸ್ಟ್ನಲ್ಲಿ 7ರಷ್ಟಾಗಿದೆ. ಈ ಸಂಬಂಧ ಎನ್ಎಸ್ಓ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷದ ಆಗಸ್ಟ್ನಲ್ಲಿ ರಿಟೇಲ್ ಹಣದುಬ್ಬರ 5.3ರಷ್ಟಿತ್ತು. ಆದರೆ,ಈಗ ಅದು ಶೇಕಡಾ 7ಕ್ಕೆ ಹೆಚ್ಚಾಗಿದೆ. ಸತತ ಎಂಟನೇ ತಿಂಗಳು ಆರ್ಬಿಐ ನಿಗದಿಪಡಿಸಿದ ಹಣದುಬ್ಬರದ ಪ್ರಮಾಣ(ಶೇ.6)ಕ್ಕಿಂತ ಹೆಚ್ಚಿಗೆ ಇದೆ.
ಆಗಸ್ಟ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಶೇಕಡಾ 6.69ರಿಂದ 7.62ಕ್ಕೆ ಹೆಚ್ಚಾಗಿದೆ ಎಂದು ಎನ್ಎಸ್ಓ ತಿಳಿಸಿದೆ.
ಕಳೆದ ಕೆಲ ತಿಂಗಳಿಂದ ಕಡಿಮೆ ಆಗುತ್ತಿದ್ದ ಹಣದುಬ್ಬರ ಜುಲೈನಲ್ಲಿ 6.71ರಷ್ಟಾಗಿತ್ತು.
ಈಗೀಗ ರಿಟೇಲ್ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ.