ADVERTISEMENT
ವೆಸ್ಟ್ಇಂಡೀಸ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಟೀಂ ಇಂಡಿಯಾ ಆಯ್ಕೆ ಆಗಿದೆ.
ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರ ಯಶಸ್ವಿನಿ ಜೈಸ್ವಾಲ್ಗೆ ಟೀಂ ಇಂಡಿಯಾದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
ಆದರೆ ಐಪಿಎಲ್ನಲ್ಲಿ ಅತ್ಯುತ್ತಮ ಫಿನಿಷರ್ ಎಂಬ ಹೆಗ್ಗಳಿಕೆ ಪಡೆದಿದ್ದ ಉತ್ತರಪ್ರದೇಶದ ಮೂಲದ ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ರಿಂಕು ಸಿಂಗ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡದೇ ಇರುವುದು ಅಚ್ಚರಿ ಮತ್ತು ಟೀಕೆಗೆ ಕಾರಣವಾಗಿದೆ.
ರಿಂಕು ಸಿಂಗ್ ಐಪಿಎಲ್ನಲ್ಲಿ 474 ರನ್ ಗಳಿಸಿದ್ದರು. 149.53 ಸ್ಟ್ರೈಕ್ರೇಟ್ನೊಂದಿದೆ ಶೇಕಡಾ 59.25 ಸರಾಸರಿಯೊಂದಿಗೆ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು.
ರಿಂಕು ಸಿಂಗ್ ಅವರ ಅತ್ಯುತ್ತಮ ಆಟಗಳು:
1. ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ಕೊನೆ ಓವರ್ನಲ್ಲಿ ಸತತ ಸಿಕ್ಸರ್ಗಳ ಮೂಲಕ ಕೇವಲ 21 ಎಸೆತಗಳಲ್ಲಿ ರಿಂಕು ಸಿಂಗ್ 48 ರನ್ ಗಳಿಸಿದ್ದರು. ರಿಕು ಅಬ್ಬರದಿಂದ ಕೋಲ್ಕತ್ತಾ ಮೂರು ವಿಕೆಟ್ಗಳ ರೋಚಕ ಜಯ ಗಳಿಸಿತ್ತು.
2. ಚೆನ್ನೈನಲ್ಲಿ ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 43 ಎಸೆತಗಳಲ್ಲಿ ರಿಂಕು ಸಿಂಗ್ 43 ರನ್ ಗಳಿಸುವುದರೊಂದಿಗೆ ಕೋಲ್ಕತ್ತಾ 6 ವಿಕೆಟ್ಗಳ ಜಯ ಗಳಿಸಿತ್ತು.
3. ಸಿಎಸ್ಕೆ ವಿರುದ್ಧದ 235 ರನ್ಗಳ ಟಾರ್ಗೆಟ್ ಬೆನ್ನಟ್ಟಿದ್ದ ಕೋಲ್ಕತ್ತಾ ಪರ ರಿಂಕು ಸಿಂಗ್ 33 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಆದ್ರೆ ಈ ಕೋಲ್ಕತ್ತಾ 49 ರನ್ಗಳಿಂದ ಸೋಲು ಅನುಭವಿಸಿತ್ತು.
4. ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ 58 ರನ್ ಗಳಿಸಿ ಅಬ್ಬರಿಸಿದ್ದರು. ಆದರೆ ಕೋಲ್ಕತ್ತಾ 23 ರನ್ಗಳಿಂದ ಸೋಲು ಅನುಭವಿಸಿತ್ತು.
5. ಲಕ್ನೋ ಸೂಪರ್ ಗೈಂಟ್ಸ್ ವಿರುದ್ಧ 33 ಎಸೆತಗಳಲ್ಲಿ 67 ರನ್ ಗಳಿಸಿ ರಿಂಕು ಸಿಂಗ್ ಘರ್ಜಿಸಿದ್ದರು. ಆದರೆ ಕೋಲ್ಕತ್ತಾ 1 ರನ್ನಿಂದ ಸೋಲ ಬೇಕಾಯಿತು.
ADVERTISEMENT