ರಾಮನವಮಿ ಸಂದರ್ಭದಲ್ಲಿ ಹಾಸ್ಟೆಲ್ ಕ್ಯಾಂಟೀನ್ನಲ್ಲಿ ಮಾಂಸಾಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕ್ಯಾಂಪಸ್ನಲ್ಲಿ ಭಾನುವಾರ ಮಧ್ಯಾಹ್ನ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, 16 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಭಾನುವಾರ ಮಧ್ಯಾಹ್ನ 3:30 ಕ್ಕೆ ಜೆಎನ್ಯುನಲ್ಲಿ ಕಾವೇರಿ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಹಾಸ್ಟೆಲ್ನಲ್ಲಿ ಮಾಂಸ ಭಕ್ಷ್ಯಗಳನ್ನು ನೀಡದಂತೆ ಸಿಬ್ಬಂದಿಯನ್ನು ತಡೆದಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ, ಎಬಿವಿಪಿ, ಹಾಸ್ಟೆಲ್ನಲ್ಲಿ ಆಯೋಜಿಸಲಾಗಿದ್ದ ಪೂಜಾ ಕಾರ್ಯಕ್ರಮವನ್ನು ಎಡ ಸಂಘಟನೆಗಳ ಸದಸ್ಯರು ತಡೆಯಲು ಪ್ರಯತ್ನಿಸಿದರು ಎಂದು ಆರೋಪಿಸಿದೆ. ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಎರಡೂ ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ.
ರಾಮನವಮಿಯಂದು ಎಬಿವಿಪಿ ವಿದ್ಯಾರ್ಥಿಗಳು ಪೂಜೆ ಹಾಗೂ ಹವನ ಮಾಡುತ್ತಿದ್ದರು. ಇದನ್ನು ಎಡಪಂಥೀಯರು ಅಡ್ಡಿಪಡಿಸುವುದಕ್ಕಾಗಿಯೇ ಮಾಂಸಾಹಾರದ ವಿಚಾರ ಮುನ್ನೆಲೆಗೆ ತಂದು ಗಲಾಟೆ ನಡೆಸಿದ್ದಾರೆ ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಾನೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಪೊಲೀಸ್ ಆಯುಕ್ತರು (ನೈಋತ್ಯ) ಮನೋಜ್ ಅವರು, ಈಗ ಯಾವುದೇ ಹಿಂಸಾಚಾರವಿಲ್ಲ. ಪ್ರತಿಭಟನೆಯನ್ನು ನಡೆಸಲಾಗಿತ್ತು, ಈಗ ಇಲ್ಲ. ವಿಶ್ವವಿದ್ಯಾನಿಲಯದ ಮನವಿಯ ಮೇರೆಗೆ ಪೊಲೀಸ್ ತಂಡ ಇಲ್ಲಿ ವಾಸ್ತವ್ಯ ಹೂಡಿದ್ದೇವೆ ಎಂದು ಹೇಳಿದ್ದಾರೆ.
https://youtu.be/NZEFlMlC7BI