ಸರ್ಕಾರಿ ಸ್ವಾಮ್ಯದ 12 ಬ್ಯಾಂಕುಗಳು ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 15,306 ಕೋಟಿ ರೂಪಾಯಿ ಲಾಭ ಗಳಿಸಿವೆ.
ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಈ ಬ್ಯಾಂಕುಗಳ ಲಾಭ ಶೇಕಡಾ 9.2ರಷ್ಟು ಹೆಚ್ಚಳ ಆಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 12 ಬ್ಯಾಂಕುಗಳು 14,013 ಕೋಟಿ ರೂಪಾಯಿ ಲಾಭ ಗಳಿಸಿದ್ದವು.
ಆದರೆ 12 ಬ್ಯಾಂಕುಗಳ ಪೈಕಿ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದ ಲಾಭ ಶೇಕಡಾ 7ರಷ್ಟು ಕುಸಿತ ಆಗಿದೆ.
ಉಳಿದ 9 ಬ್ಯಾಂಕುಗಳ ಲಾಭ ಶೇಕಡಾ 3-117ರವರೆಗೆ ಲಾಭ ಗಳಿಸಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಅತೀ ಹೆಚ್ಚು ಅಂದರೆ 452 ಕೋಟಿ ರೂಪಾಯಿ ಲಾಭ ಗಳಿಸಿವೆ.