ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಹೋಗುತ್ತಿದ್ದ ಯುವಕನ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಆ ಯುವಕ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿಖಿಲ್ ಮೃತ ಯುವಕ.
ಯಶ್ ಅವರ 38ನೇ ಹುಟ್ಟಹಬ್ಬದ ಹಿನ್ನೆಲೆ ಶುಭಾಶಯ ಕೋರಿ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಗದಗಿನ ಸೂರಣಗಿ ಗ್ರಾಮದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಯಶ್ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ನಿಖಿಲ್ ತನ್ನ ಬೈಕ್ನಲ್ಲಿ ಯಶ್ ಅವರ ವಾಹನವನ್ನು ಹಿಂಬಾಲಿಸಿದ್ದ.
ಬೈಕ್ಗೆ ಡಿಕ್ಕಿ ಹೊಡೆದ ಜೀಪ್ ಯಶ್ ಬೆಂಗಾವಲು ವಾಹನ ಅಲ್ಲ. ಅದು ಪೊಲೀಸ್ ಹೆಡ್ ಕ್ವಾಟರ್ಗೆ ಹೋಗುವ ಪೊಲೀಸ್ ಜೀಪ್. ನಟ ಯಶ್ ಅವರನ್ನು ಬೈಪಾಸ್ ಹೈವೇ ಯಿಂದಲೇ ಹುಬ್ಬಳ್ಳಿಗೆ ಕಳಿಸಲಾಗಿದೆ. ನಟ ಯಶ್ ಅವರ ಬೆಂಗಾವಲು ವಾಹನಕ್ಕೂ ಈ ಅಪಘಾತಕ್ಕೂ ಸಂಬಂಧವಿಲ್ಲ. ನಟ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಹೇಳಿದ್ದಾರೆ.
ADVERTISEMENT
ADVERTISEMENT