ರಾಕಿಂಗ್ ಸ್ಟಾರ್ ಯಶ್. ಈಗ ಪ್ಯಾನ್ ಇಂಡಿಯಾ ಹೀರೋ. ಅಂದರೆ ಭಾರತದಲ್ಲಿ ಯಾವ ಮೂಲೆಗೆ ಹೋದ್ರೂ ನಮ್ಮ ರಾಜಾಹುಲಿಗೆ ಸಲಾಂ ರಾಕಿಭಾಯ್ ಅನ್ನೋ ಅಭಿಮಾನಿಗಳು ಸಿಕ್ಕೇ ಸಿಗ್ತಾರೆ. ದೇಶದ ಯಾವ ಕಡೆಗೆ ಹೋದ್ರೂ ನಮ್ಮ ಮಾಸ್ಟರ್ ಪೀಸ್ಗೆ ಅಭಿಮಾನಿಗಳು ಮುಗಿಬೀಳ್ತಾರೆ, ನಮ್ಮ ಮಿಸ್ಟರ್ ರಾಮಾಚಾರಿಗೆ ದೇಶದ ಎಲ್ಲೇ ಹೋದ್ರೂ ಅಭಿಮಾನಿಗಳು ಜೈ ಅಂತಾರೆ. ಕೆಜಿಎಫ್ ರಾಕಿಂಗ್ ಸ್ಟಾರ್ ಸಿನಿಮಾ ಬದುಕಿಗೆ ಪ್ಯಾನ್ ಇಂಡಿಯಾ ಇಮೇಜ್ ಕೊಟ್ಟು ಕನ್ನಡದ ನಟನೊಬ್ಬ ಗಡಿಯ ಎಲ್ಲೆಗಳನ್ನು ಮೀರಿ ದೈತ್ಯತ್ತೆರಕ್ಕೆ ಬೆಳೆಯುವಂತೆ ಮಾಡಿದ ಸಿನಿಮಾ.
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಎಷ್ಟು ಭಾಷೆ ಬರುತ್ತೆ..? ಯಾಕೆ ಈ ಪ್ರಶ್ನೆ ಅಂತೀರಾ..? ಕೆಜಿಎಫ್ ಕನ್ನಡದಲ್ಲಷ್ಟೇ ಬಿಡುಗಡೆ ಆಗ್ತಿಲ್ಲ. ನಮ್ಮ ಪಕ್ಕದ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆ ಆಗ್ತಿದೆ.
ಇದೇ ಏಪ್ರಿಲ್ 14ರಂದು ಅಂದ್ರೆ ಮುಂದಿನ ಗುರುವಾರ ಕೆಜಿಎಫ್ ಆರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗ್ತಿದೆ. ಯುಗಾದಿ ಬಳಿಕ ಸಿನಿರಸಿಕರು ಕೆಜಿಎಫ್ ಹಬ್ಬ ಮಾಡುವುದಕ್ಕೆ ಕಾಯ್ಕೊಂಡು ಕೂತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಜಿಎಫ್ ಚಿತ್ರತಂಡ ದೇಶದ ಉದ್ದಗಲಕ್ಕೂ ಸಿನಿಮಾ ಪ್ರಚಾರದಲ್ಲಿ ತೊಡಗಿದೆ. ರಾಕಿಂಗ್ ಸ್ಟಾರ್ ಅವರಿಗೆ ಸಲಾಂ ಭಾಯ್ ಹೇಳ್ಬೇಕು ಅಂತ ಅಭಿಮಾನಿಗಳು ಹೋದ ಕಡೆಯೆಲ್ಲ ಜಮಾಯಿಸ್ತಿದ್ದಾರೆ. ವಿಶೇಷ ಅಂದ್ರೆ ರಾಕಿಂಗ್ ಭಾಯ್ ಯಾವ ಊರಿಗೆ ಹೋಗ್ತಾರೆ ಅಲ್ಲಿ ಅದೇ ಊರಿನ ಭಾಷೆ ಮಾಡ್ತಾರೆ. ಕರ್ನಾಟಕದಲ್ಲಿ ನಮ್ಮ ತಾಯ್ನುಡಿ ಕನ್ನಡ, ತಮಿಳುನಾಡಿಗೆ ಹೋದ್ರೆ ಅಲ್ಲಿ ತಮಿಳು, ಕೇರಳಕ್ಕೆ ಹೋದ್ರೆ ಅಲ್ಲಿ ಮಲಯಾಳಂ, ಆಂಧ್ರ, ತೆಲಂಗಾಣಕ್ಕೆ ಹೋದ್ರೆ ಅಲ್ಲಿ ತೆಲುಗು, ಹಿಂದಿ ಭಾಷಿಕರ ಊರಿಗೆ ಹೋದ್ರೆ ಅಲ್ಲಿ ಹಿಂದಿ. ಜೊತೆಗೆ ಅಭಿಮಾನಿಗಳಿಗೋಸ್ಕರ ಕೆಜಿಎಫ್ ಚಾಪ್ಟರ್ 2ನಲ್ಲಿ ಸದ್ದು ಮಾಡಿರುವ ಇಂಗ್ಲೀಷ್ ಡೈಲಾಗ್ನ್ನೂ ಹೊಡೀತಿದ್ದಾರೆ ನಮ್ಮ ರಾಕಿಭಾಯ್.
ನಮ್ಮ ರಾಕಿಂಗ್ ಸ್ಟಾರ್ ಯಶ್ಗೆ ಕಮ್ಮಿ ಅಂದ್ರೂ ಆರು ಭಾಷೆ ಬರುತ್ತೆ. ನಾವು ಯಾವ ಊರಿಗೆ ಹೋಗ್ತೀವೋ ಅಲ್ಲಿ ಅವರ ಭಾಷೆ ಮಾತಾಡುವುದು ನಾವು ಕೂಡಾ ನಿಮ್ಮವರೇ ಎಂಬುದರ ಗುರುತು. ರಾಕಿಭಾಯ್ ಆ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಕೊಡ್ತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ, ಅಡಿಯಿಟ್ಟ ಭಾಷೆ ಕನ್ನಡವೇ, ಅದಕ್ಕೆ ಯಾವುತ್ತಿದ್ದರೂ ತಾಯಿ ಸ್ಥಾನ, ಅದನ್ನ ಎಂದಿಗೂ ಮರೆತಿಲ್ಲ ನಮ್ಮ ರಾಮಾಚಾರಿ. ಅದರ ಜೊತೆಗೆ ಉಳಿದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಅಲ್ಲಿನ ಅಭಿಮಾನಿಗಳ ಜೊತೆಗೆ ಅವರ ಭಾಷೆಯೊಂದಿಗೆ ಮಾತಾಡಿದ್ರೆ ಅಲ್ಲಿನ ಅಭಿಮಾನಿಗಳಿಗೂ ಪ್ರೀತಿ ತೋರಿಸಿದಂತೆ, ಗೌರವ ಕೊಟ್ಟಂತೆ.