ಇಡೀ ಚಿತ್ರರಂಗದಲ್ಲಿಯೇ ಹೈಪ್ ಕ್ರಿಯೇಟ್ ಮಾಡಿದ್ದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತೆ ಯಾವುದೇ ಸಿನಿಮಾ ತೆರೆ ಮೇಲೆ ಬಂದಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಯಶ್ ಏನು ಮಾಡುತ್ತಿದ್ದಾರೆ ಎಂದು ಯಾವುದೇ ಅಪ್ ಡೆಟ್ ಸಿಕ್ಕಿರಲಿಲ್ಲ. ಇದರಿಂದ ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನು ಉಂಟು ಮಾಡಿತ್ತು.
ಯಶ್ ಮುಂದಿನ ಚಿತ್ರ ಯಾವುದಾಗಿರಬಹುದು ಎಂದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿತ್ತು. ಆದ್ರೆ ಇದೀಗ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಹೌದು ರಾಕಿಂಗ್ ಸ್ಟಾರ್ ಅಭಿನಯದ ಮುಂದಿನ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಇದೇ ತಿಂಗಳು 8 ರಂದು ಅವರ ಮುಂದಿನ ಸಿನಿಮಾದ ಟೈಟಲ್ ಅನ್ನು ಬಹಿರಂಗ ಪಡಿಸಲಿದ್ದಾರೆ.
ಕೆವಿಎನ್ ಪ್ರೋಡಕ್ಷನ್ ವತಿಯಿಂದ ಇದೇ ತಿಂಗಳು 8 ರಂದು ಬೆಳಗ್ಗೆ 9.55 ರಂದು ಬಿಗ್ ಅನೌನ್ಸ್ ಮಾಡಲಿದ್ದಾರೆ. ಈ ಬಗ್ಗೆ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೀಗಾಗಿ ಆ ಮುಂದಿನ ಸಿನಿಮಾ ಯಾವುದು ಎಂದು ಯಶ್ ಅಭಿಮಾನಿಗಳು ಕಾತರುದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ಪ್ರೋಡಕ್ಷನ್ ಸಂಸ್ಥೆ ಬಂಡವಾಳ ಹೂಡಲಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ಹಾಲಿವುಡ್ ಜನಪ್ರಿಯ ನಿರ್ದೇಶಕ ಕರೆತಂದಿದ್ದಾರೆ ಎಂದು ಹೇಳಲಾಗಿದೆ. ಶ್ರೀಲಂಕಾದಲ್ಲೇ ಸಿನಿಮಾದ ಚಿತ್ರೀಕರಣ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಇನ್ನುಳಿದಂತೆ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡವೇ ನೀಡಬೇಕಿದೆ.
And the much awaited Countdown begins…⏳#Yash19 Title Announcement on 8th Dec at 9:55 AM 🔒@TheNameIsYash pic.twitter.com/pSvk3cdyXs
— KVN Productions (@KvnProductions) December 4, 2023