ಪಶ್ಚಿಮ ಬಂಗಾಳದ ಬಿರ್ಭುಮ್ನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಸುಟ್ಟು ಕೊಂದ ಕರಾಳ ಕೃತ್ಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸಂಸದೆ ರೂಪಾ ಗಂಗೂಲಿ ಕಣ್ಣೀರು ಹಾಕಿದರು.
`ಪಶ್ಚಿಮ ಬಂಗಾಳದಲ್ಲಿ ಸಾಮೂಹಿಕ ಹತ್ಯೆ ನಡೆಯುತ್ತಿದೆ. ಜನರು ರಾಜ್ಯವನ್ನು ಬಿಟ್ಟು ಓಡಿಹೋಗ್ತಿದ್ದಾರೆ. ರಾಜ್ಯದಲ್ಲಿ ಬದುಕುವುದು ಆಗುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ರಾಷ್ಟçಪತಿ ಆಡಳಿತ ಹೇರಿ’ ಎಂದು ಸಂಸದೆ ಆಗ್ರಹಿಸಿದರು.
`ಸರ್ಕಾರದ ವಿರುದ್ಧ ಜನರಿಗೆ ಮಾತಾಡಲು ಆಗುತ್ತಿಲ್ಲ. ಕೊಲೆಗಡುಕರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ’ ಎಂದು ರೂಪಾ ಗಂಗೂಲಿ ಆರೋಪಿಸಿದರು.
ಟಿಎಂಸಿ ಮುಖಂಡನ ಹತ್ಯೆ ಬಳಿಕ ಉದ್ರಿಕ್ತ ಗುಂಪು ಮಕ್ಕಳು ಮತ್ತು ಮಹಿಳೆಯರು ಸೇರಿ 8 ಮಂದಿಯನ್ನು ಮೊದಲಿಗೆ ಥಳಿಸಿ ಬಳಿಕ ಬೆಂಕಿ ಹಾಕಿ ಸುಟ್ಟು ಕೊಂದಿತ್ತು. ಈ ನರಮೇಧದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ಇವತ್ತು ಸಿಬಿಐಗೆ ಒಪ್ಪಿಸಿದೆ. ಸಿಬಿಐಗೆ ಒಪ್ಪಿಸುವುದಕ್ಕೆ ಮಮತಾ ಬ್ಯಾನಜಿ9 ಸರ್ಕಾರದ ಆಕ್ಷೇಪವನ್ನು ಹೈಕೋರ್ಟ್ ಮಾನ್ಯ ಮಾಡಿಲ್ಲ.