ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಸಿಕ್ಕಿಬಿದ್ದಿದ್ದಾನೆೆ. IPC 107 ಅಡಿಯಲ್ಲಿ ಸಿಸಿಬಿ ಪೊಲೀಸರು ಶಂಕರನನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಸಂಜೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಕೀಲರನ್ನು ನೋಡಲು ಬಂದಿದ್ದ ಶಂಕರ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಶಂಕರ ವಕೀಲನ ಭೇಟಿಗೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಪೊಲೀಸರು ಈತ ನಗರದಲ್ಲಿ ಯಾವುದೇ ಅಹಿತಕರ ಕೆಲಸಗಳನ್ನು ಮಾಡಬಾರದು ಎಂದು 4 ಲಕ್ಷ ರೂಪಾಯಿ ಬಾಂಡ್ ಬರೆಸಿಕೊಂಡಿದ್ದರೆ.
ಸೈಲೆಂಟ್ ಸುನೀಲ, ಫೈಟರ್ ರವಿ ಬಿಜೆಪಿ ಸೇರಬೇಕು ಎಂದು ಪ್ರಯತ್ನ ಪಡುತ್ತಿದ್ದಾಗಲೇ ಬೆತ್ತನಗೆರೆ ಶಂಕರ ಕೂಡಾ ಬಿಜೆಪಿ ಸೇರುವ ತಯಾರಿ ನಡೆಸಿದ್ದ. ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರ ಜೊತೆ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.