ಕಾನೂನು ಬಾಹಿರವಾಗಿ ಆರ್ಎಸ್ಎಸ್ ಸಹವರ್ತಿ ಸಂಘಟನೆಗಳಿಗೆ ಮಾಡಲಾಗಿದ್ದ ದುಬಾರಿ ಬೆಲೆಯ ಗೋಮಾಳ ಜಮೀನು ಮಂಜೂರಾತಿಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತಡೆ ನೀಡಿದೆ.
ನಿಯಮಗಳನ್ನು ಉಲ್ಲಂಘಿಸಿ ಬಿಜೆಪಿ ಸರ್ಕಾರ ಆರ್ಎಸ್ಎಸ್ ಜೊತೆಗೆ ಗುರುತಿಸಿಕೊಂಡಿರುವ ಜನಸೇವಾ ಟ್ರಸ್ಟ್ಗೆ ಬರೋಬ್ಬರೀ 35 ಎಕರೆ 33 ಸೆಂಟ್ಸ್ ಗೋಮಾಳ ಭೂಮಿಯನ್ನು ಮಂಜೂರು ಮಾಡಿತ್ತು.
ಕುರುಬರಹಳ್ಳಿ, ತಾವರೆಕೆರೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಭಾರೀ ಪ್ರಮಾಣದಲ್ಲಿ ಗೋಮಾಳ ಜಮೀನನ್ನು ಜನಸೇವಾ ಟ್ರಸ್ಟ್ಗೆ ನಿಯಮ ಮೀರಿ ಮಂಜೂರು ಮಾಡಲಾಗಿತ್ತು.
2109ರಿಂದ 2022ರವರೆಗೆ ಬಿಜೆಪಿ ಸರ್ಕಾರ ಹಲವು ನಿಯಮಗಳನ್ನು ಉಲ್ಲಂಘಿಸಿ ಹಲವು ಸಂಘಟನೆಗಳಿಗೆ 252 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.
ಬಿಜೆಪಿ ಸರ್ಕಾರದಲ್ಲಾದ ಗೋಮಾಳ ಭೂಮಿ ಮಂಜೂರಾತಿಗೆ ಸಿಎಂ ಸಿದ್ದರಾಮಯ್ಯ ಅವರು ಮೇ 25ರಂದು ತಡೆ ನೀಡಿ ಆದೇಶ ಹೊರಡಿಸಿದ್ದರು.
ಈ ಬಗ್ಗೆ ವಿಧಾನಸಭೆಯಲ್ಲಿ ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸರ್ಕಾರಕ್ಕೆ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಿಸಿದ್ದಾರೆ.
2008ರ ಜನವರಿಯಲ್ಲಿ ಆಗ ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರು ನಗರ ಸುತ್ತಮುತ್ತ ಇರುವ ಗೋಮಾಳ ಜಮೀನು ಮಂಜೂರು ಸಂಬಂಧ ನಿಯಮಗಳನ್ನು ಸಡಿಲಿಕೆ ಮಾಡಲಾಯಿತು.
ADVERTISEMENT
ADVERTISEMENT