ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಮಂಗಳವಾರದ ವಹಿವಾಟು ಆರಂಭದಲ್ಲಿಯೇ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ವಿದೇಶಿ ಕರೆನ್ಸಿ ವಿನಿಮಯದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ 22 ಪೈಸೆಯಷ್ಟು ಕುಸಿತ ಕಂಡಿದ್ದು, ಪ್ರತಿ ಡಾಲರ್ಗೆ 78.66 ರೂಪಾಯಿಯಲ್ಲಿ ವಹಿವಾಟು ನಡೆದಿದೆ. ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 4 ಪೈಸೆ ಕಡಿಮೆಯಾಗಿ 78.37 ತಲುಪಿತ್ತು.
ದೇಶದ ಷೇರುಪೇಟೆಗಳಲ್ಲಿ ವಿದೇಶಿ ಹೂಡಿಕೆದಾರರು ಸತತವಾಗಿ ಹೂಡಿಕೆ ಹಿಂಪಡೆಯುತ್ತಿದ್ದು, ಅದರ ಪರಿಣಾಮ ರೂಪಾಯಿಯ ಮೇಲೆ ಒತ್ತಡ ಉಂಟಾಗುತ್ತಿರುವುದಾಗಿ ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.