ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 77 ರೂಪಾಯಿಕ್ಕೆ ಕುಸಿದಿದೆ. ಇವತ್ತು ಡಾಲರ್ ಎದುರು ರೂಪಾಯಿ 77 ರೂಪಾಯಿ 42 ಪೈಸೆಗೆ ಕುಸಿದಿತ್ತು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಆಮದು ಮಾಡಿಕೊಳ್ಳುವ ವಸ್ತುಗಳು ಇನ್ನಷ್ಟು ದುಬಾರಿ ಆಗಲಿವೆ. ವಿಶೇಷವಾಗಿ ಕಚ್ಚಾತೈಲ ಆಮದು ದುಬಾರಿ ಆಗಲಿದ್ದು, ಈಗಾಗಲೇ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ಇನ್ನಷ್ಟು ತುಟ್ಟಿ ಆಗುವ ನಿರೀಕ್ಷೆ ಇದೆ. ಕಚ್ಚಾತೈಲ ಬೆಲೆ ಈಗ ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 112 ಡಾಲರ್ ಇದೆ.
ಡಾಲರ್ ಎದುರು ರೂಪಾಯಿ ವಿನಮಯ ದರ ಕುಸಿತದಿಂದ ಕಚ್ಚಾತೈಲ ಖರೀದಿಗೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ.
ಇನ್ನು ವಿದೇಶಿ ವಿನಿಯಮ ಮೀಸಲು ಮೊತ್ತ 45 ಬಿಲಿಯನ್ ಡಾಲರ್ನ್ನಷ್ಟು ಕುಸಿತಕಂಡಿದ್ದು, 598 ಬಿಲಿಯನ್ ಡಾಲರ್ಗೆ ಕುಸಿದಿದ್ದು, ಇದು ಕೂಡಾ ದಾಖಲೆ ಕುಸಿತವಾಗಿದೆ.