ರಷ್ಯಾ ಸೇನೆಗಳು ಉಕ್ರೇನ್ ದೇಶದಲ್ಲಿ ಸಾಮೂಹಿಕ ನರಮೇಧವನ್ನೇ ಸೃಷ್ಟಿ ಮಾಡುತ್ತಿವೆ. ಮಾರಿಯುಪೋಲ್ ನಗರದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಬುಧವಾರ ಭಾರಿ ಪ್ರಾಣ ಹಾನಿ ಸಂಭವಿಸಿದೆ.
ಮಾರಿಯುಪೋಲ್ ನಗರದ ರಂಗಮಂದಿರ ಒಂದರ ಮೇಲೆ ರಷ್ಯಾ ವಾಯುಪಡೆ ಬಾಂಬ್ ಹಾಕಿದೆ.
ಈ ಸಂದರ್ಭದಲ್ಲಿ ನೂರಾರು ಮಕ್ಕಳು 1200 ಪೌರರು ಥಿಯೇಟರ್ ನಲ್ಲಿ ರಕ್ಷಣೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಈ ಘನಘೋರ ಬಾಂಬ್ ದಾಳಿಯಿಂದ ಇಡೀ ಡ್ರಾಮ ಥಿಯೇಟರ್ ನಾಶ ಆಗಿದ್ದು, ದೊಡ್ಡ ಮಟ್ಟದಲ್ಲಿ ಪ್ರಾಣ ಹಾನಿ ಆಗಿದೆ.. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.