ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಎರಡರಿಂದ ಮೂರುವರ್ಷವಷ್ಟೇ ಬದುಕಬಹುದು ಎಂದು ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವಿಸ್ (ಎಫ್ಎಸ್ಬಿ)ಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪ್ರಮುಖ ಬ್ರಿಟನ್ ದೈನಿಕ ಇಂಡಿಪೆಂಡೆಂಟ್ ವರದಿ ಮಾಡಿದೆ.
`69 ವರ್ಷದ ವ್ಲಾಡಿಮೀರ್ ಪುಟಿನ್ಗೆ ಕ್ಯಾನ್ಸರ್ ವೇಗವಾಗಿ ಹರಡುತ್ತಿದ್ದು, ದೃಷ್ಟಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಎರಡರಿಂದ ಮೂರು ವರ್ಷ ಬದುಕಬಹುದು’ ಎಂದು ಆ ಅಧಿಕಾರಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
`ವ್ಲಾಡಿಮೀರ್ ಪುಟಿನ್ ತೀವ್ರ ಸ್ವರೂಪದ ತಲೆನೋವಿನಿಂದ ಬಳಲುತ್ತಿದ್ದಾರೆ. ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೇಳೆ ಹಾಳೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದುಕೊಡಬೇಕಿದೆ. ಅವರ ಕೈ ಕಾಲು ನಿಯಂತ್ರಿಸಲಾಗದಷ್ಟು ನಡುಗುತ್ತಿವೆ’ ಎಂದು ಆ ಅಧಿಕಾರಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಆದರೆ ರಷ್ಯಾ ಅಧ್ಯಕ್ಷರ ಆರೋಗ್ಯ ಕುರಿತ ಈ ವರದಿಯಲ್ಲಿ ರಷ್ಯಾ ಸರ್ಕಾರ ನಿರಾಕರಿಸಿದ್ದು, ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.