ವನ್ಯಜೀವಿ (Wild Life) ನಿಯಮಗಳನ್ನು ಉಲ್ಲಂಘಿಸಿ ಸೂರ್ಯಾಸ್ತದ (sunset) ಬಳಿಕ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಸಫಾರಿ (Safari) ಕೈಗೊಂಡಿದ್ದ ಸದ್ದುರು ಜಗ್ಗಿ ವಾಸುದೇವ್ (Sadguru Jaggi Vasudev) ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ (Assam CM Himanta Biswa Sarma) ವಿರುದ್ಧ ದೂರು ದಾಖಲಾಗಿದೆ.
ಕ್ರಮಕೈಗೊಳ್ಳುವವರು ಯಾರು..? ಕ್ರಮಕೈಗೊಳ್ತಾರಾ..?
ವನ್ಯಜೀವಿ ನಿಯಮಗಳ ಪ್ರಕಾರ ಸೂರ್ಯಾಸ್ತದ ಬಳಿಕ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಅವಕಾಶವಿಲ್ಲ. ಆದರೆ ಸ್ವತಃ ಮುಖ್ಯಮಂತ್ರಿಯೇ ನಿಯಮಗಳನ್ನು ಉಲ್ಲಂಘಿಸಿರುವಾಗ ಕ್ರಮಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಎಲ್ಲರದ್ದು. ತಪ್ಪಿದ ಕರೆ (missed call) ಮೂಲಕ ಕಾವೇರಿ ಉಳಿಸಿ ಮತ್ತು ಮಣ್ಣು ಉಳಿಸಲು (Save soil) ದುಬಾರಿ ವೆಚ್ಚದ ಬೈಕ್ನಲ್ಲಿ ಸುತ್ತಾಡಿದ್ದ ಸದ್ದುರು ವಿರುದ್ಧ ಈಗ ವನ್ಯಜೀವಿ ನಿಯಮ ಉಲ್ಲಂಘನೆ ಸಂಬಂಧ ಕ್ರಮಗಳಾಗುತ್ತಾ..? ಎಂಬುದೇ ಎಲ್ಲರ ಪ್ರಶ್ನೆ.
ಆದರೆ ಭಾನುವಾರ ಸೂರ್ಯ ಮುಳುಗಿದ ಬಳಿಕ ಸದ್ಗುರು ಮತ್ತು ಅಸ್ಸಾಂ ಮುಖ್ಯಮಂತ್ರಿ ಇಬ್ಬರೂ ತಮ್ಮ ಆಪ್ತರ ಜೊತೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೈಗೊಂಡಿದ್ದರು.
ಜಗ್ಗಿ ವಾಸುದೇವ್ ಡ್ರೈವರ್ ಸೀಟಿನಲ್ಲಿ ಕೂತಿದ್ದರೆ, ಮುಖ್ಯಮಂತ್ರಿ ಹೇಮಂತ ಬಿಸ್ವಾ ಸರ್ಮಾ ಅವರ ಪಕ್ಕದ ಸೀಟಿನಲ್ಲಿ ಕೂತಿದ್ದರು. ಹಿಂಬದಿಯಲ್ಲಿ ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುಹಾ ಕೂಡಾ ಇದ್ದರು.
ವನ್ಯಜೀವಿ ನಿಯಮಗಳ ಉಲ್ಲಂಘನೆ ಸಂಬಂಧ ಇಬ್ಬರು ಸ್ಥಳೀಯರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ಮತ್ತು ಜಗ್ಗಿ ವಾಸುದೇವ್ ವಿರುದ್ಧ ದೂರು ನೀಡಿದ್ದಾರೆ.
ಮಾನ್ಸೂನ್ ತಿಂಗಳಲ್ಲಿ ಸಫಾರಿಗೆ ಅವಕಾಶವಿಲ್ಲ:
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಸಫಾರಿಗೆ ಅವಕಾಶ ಸಿಗುವುದೇ ನವೆಂಬರ್ನಿಂದ ಏಪ್ರಿಲ್ ತಿಂಗಳ ನಡುವೆ ಮಾತ್ರ. ಏಪ್ರಿಲ್ನಿಂದ ಅಕ್ಟೋಬರ್ ಕೊನೆವರೆಗೂ ಸಫಾರಿಗೆ ಅವಕಾಶ ಇಲ್ಲ. ಹಾಗಿದ್ದರೂ ಜಗ್ಗಿ ವಾಸುದೇವ್ ಮಾನ್ಸೂನ್ ತಿಂಗಳಲ್ಲಿ ಸಫಾರಿಗೆ ಹೋಗಿ ನಿಯಮ ಉಲ್ಲಂಘನೆ ಮಾಡಿದ್ದಾರೆ.
ದೀಪಗಳನ್ನು ಬಳಸುವಂತಿಲ್ಲ:
ರಾಷ್ಟ್ರೀಯ ಉದ್ಯಾನವನದಲ್ಲಿ ಸೂರ್ಯಾಸ್ತದ ಬಳಿಕ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುವ ಕಾರಣ ಪ್ರಖರವಾಗಿರುವ ದೀಪಗಳ (Lights) ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಶನಿವಾರ ಸೂರ್ಯಾಸ್ತದ ಬಳಿಕ ಕಾಜಿರಂಗದಲ್ಲಿ ನಡೆದಿರುವ ಸಫಾರಿ ವೇಳೆ ಜೀಪ್ಗಳ ದೀಪ, ಕ್ಯಾಮರಾಗಳ ದೀಪಗಳನ್ನು ಬಳಸಲಾಗಿದೆ. ಈ ದಂಡು ಸಫಾರಿ ಮಾಡುವ ವೇಳೆ ಪಕ್ಕದಲ್ಲೇ ಆನೆಯೊಂದು ಕಾಣಿಸಿಕೊಂಡಿತ್ತು.
Inspiring words from Sadhguru Jaggi Vasudev during his visit to Kaziranga National Park along with Hon'ble CM Dr @himantabiswa!@SadhguruJV pic.twitter.com/IaiWLvooPd
— MyGov Assam (@mygovassam) September 24, 2022