ಬೆಂಗಳೂರು : ಹಿರಿಯ ನಟಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರ ಫೇಸ್ ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಈ ಕುರಿತು ತಾರಾ ಅನೂರಾಧಾ ಸೈಬರ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ನಾನು ತಾರಾ ಅನುರಾಧ ಮತ್ತು ತಾರಾ ಅನುರಾಧಾ ವೇಣು ಎಂಬ ಹೆಸರಿನಲ್ಲಿ ಎರಡು ಫೇಸ್ ಬುಕ್ ಐಡಿ ಹೊಂದಿದ್ದೇನೆ. ಇವುಗಳ ಪೈಕಿ ತಾರಾ ಅನುರಾಧಾ ವೇಣು ಐಡಿಯನ್ನು ಹೆಚ್ಚಾಗಿ ಬಳಸುತ್ತೇನೆ. ಆದರೆ ನಿನ್ನೆ ಪರಿಚಿತರೊಬ್ಬರು ಕರೆ ಮಾಡಿ ನನಗೆ ತಾರಾ ಅನುರಾಧಾ ಐಡಿಯಲ್ಲಿ ಅಸಂಬದ್ಧ ಪೋಸ್ಟ್ ಒಂದು ಹಂಚಿಕೊಂಡಿರುವುದಾಗಿ ತಿಳಿಸಿದರು ಎಂದು ತಾರಾ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಜೊತೆಗೆ, ನನ್ನ ಹೆಸರಿನ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಫೇಕ್ ಫೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಸೈಬರ್ ಠಾಣೆಗೆ ದೂರು ನೀಡಿದ್ದೇನೆ. ಆ ಪೋಸ್ಟ್ಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ರೀತಿಯ ಬೆಳವಣಿಗೆ ಅತಂಕಕಾರಿ. ಈ ಫೇಕ್ ಪೋಸ್ಟ್ಗಳಿಗೆ ಬೆಲೆ ಕೊಡಬೇಡಿ ನಟಿ ತಾರಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.