ನೇಪಾಳದ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚನೆಯವರ (Sandeep Lamichhane) ಮೇಲೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ.
ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೋಟೆಲ್ ಒಂದರಲ್ಲಿ 17 ವರ್ಷದ ಬಾಲಕಿ ಮೇಲೆ 22 ವರ್ಷದ ಕ್ರಿಕೆಟ್ ಆಟಗಾರ ಸಂದೀಪ್ ಲಮಿಚ್ಚನೆ 3 ವಾರಗಳ ಹಿಂದೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಂತ್ರಸ್ತ ಬಾಲಕಿ ಕಾಠ್ಮಂಡುವಿನ ಗೌಶಾಲಾದ ಮೆಟ್ರೋಪಾಲಿಟಿನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ : 4 ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳ ವಿಮಾನದ ಸಂಪರ್ಕ ಕಡಿತ
ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಸಂದೀಪ್ ಲಮಿಚ್ಚನೆ ಬಾಲಕಿಯನ್ನು ಅಗಷ್ಟ್ 21 ರಂದು ಕಾಠ್ಮಂಡು ಮತ್ತು ಭಕ್ತಪುರ್ನ ಬೇರೆ ಬೇರೆ ಸ್ಥಳಗಳಲ್ಲಿ ಸುತ್ತಾಡಿಸಿದ್ದಾನೆ. ಅಂದೇ ರಾತ್ರಿ ವೇಳೆ ಕಾಠ್ಮಂಡುವಿನ ಹೋಟೆಲ್ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಣ ದಾಖಲಾಗಿದೆ ಸಾಕ್ಷಿ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿಚಾರಣಾಧೀನ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಂದೀಪ್ ಲಮಿಚ್ಚನೆ (Sandeep Lamichhane) ಪ್ರಸ್ತುತ ಕೆರಿಬಿಯನ್ ಕ್ರಿಕೆಟ್ ಲೀಗ್ (CPL) ನಲ್ಲಿ ಆಡುತ್ತಿದ್ದಾರೆ. 2018 ರಲ್ಲಿ ಭಾರತದ ಐಪಿಎಲ್ನಲ್ಲಿ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ, ಐಪಿಎಲ್ನಲ್ಲಿ ಸ್ಥಾನ ಪಡೆದ ಮೊದಲ ನೇಪಾಳ ಕ್ರಿಕೆಟರ್ ಆಗಿದ್ದಾರೆ.
ಇವರನ್ನು ಇತ್ತೀಚೆಗಷ್ಟೇ ನೇಪಾಳ ಕ್ರಿಕೆಟ್ ಟೀಂಗೆ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟಗಾರ ಸಂದೀಪ್, ಇದು ಸುಳ್ಳು ಆರೋಪ. ನಾನು ನಿರಪರಾಧಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ಭಾರತದ UPI ಅಳವಡಿಸಿಕೊಂಡ ನೇಪಾಳ