ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಸಾರಾ ಟೇಲರ್ ದಂಪತಿಗೆ ಗಂಡು ಮಗುವಾಗಿದೆ. ತನ್ನ ಜೊತೆಗಾರ್ತಿ ಡಯಾನಾ ಮೈನ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಟೇಲರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾರಾ ಟೇಲರ್ ಅವರ ಸ್ತ್ರೀ ಸಲಿಂಗಿಯಾಗಿದ್ದು, ಇದೇ ಫೆಬ್ರವರಿಯಲ್ಲಿ ತನ್ನ ಸಂಗಾತಿ ಡಯಾನಾ ಗರ್ಭಿಣಿ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
34 ವರ್ಷದ ಸಾರಾ ಟೇಲರ್-ಡಯಾನಾ ದಂಪತಿ ತಮ್ಮ ಮಗುವಿಗೆ ಲೌರಿ ಎಂದು ನಾಮಕರಣ ಮಾಡಿದ್ದಾರೆ.
ADVERTISEMENT
2009 ಮತ್ತು 2017ರಲ್ಲಿ ಮಹಿಳಾ ವಿಶ್ವಕಪ್ ಗೆದ್ದ ಬ್ರಿಟನ್ ತಂಡದಲ್ಲಿದ್ದ ಸಾರಾ ಟೇಲರ್ 2009ರಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ತಂಡದಲ್ಲೂ ಆಡಿದ್ದರು.
126 ಏಕದಿನ ಪಂದ್ಯದಲ್ಲಿ 4,056 ರನ್ ಗಳಿಸಿರುವ ಸಾರಾ 7 ಶತಕ ಮತ್ತು 20 ಅರ್ಧಶತಕ ಗಳಿಸಿದ್ದಾರೆ.
90 ಟಿ-ಟ್ವೆಂಟಿ ಪಂದ್ಯದಲ್ಲಿ 2,177 ರನ್ ಗಳಿಸಿರುವ ಸಾರಾ ಟೇಲರ್ 16 ಅರ್ಧಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆ್ಯಡಂ ಗಿಲ್ಕ್ರಿಸ್ಟ್ ಅವರು ಸಾರಾ ಅವರನ್ನು ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಏಕದಿನ ಪಂದ್ಯದಲ್ಲಿ 85 ಕ್ಯಾಚ್ ಮತ್ತು 51 ಸ್ಟಂಪಿಂಗ್ ಮಾಡಿರುವ ಸಾರಾ ಟೇಲರ್ ಟಿ-ಟ್ವೆಂಟಿಯಲ್ಲಿ 23 ಕ್ಯಾಚ್ ಮತ್ತು 51 ಸ್ಟಂಪಿಂಗ್ ಮಾಡಿದ್ದಾರೆ. 2019ರಲ್ಲಿ ಸಾರಾ ಟೇಲರ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು.
ADVERTISEMENT