ಸಟ್ಲೇಜ್ ಜಲ್ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ : 175
ಟೆಕ್ನೀಷಿಯನ್ ಅಪ್ರೆಂಟಿಸ್ : 100
ಟ್ರೇಡ್ ಅಪ್ರೆಂಟಿಸ್ : 125
ಹುದ್ದೆವಾರು ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ : ಬಿಇ, ಬಿ.ಟೆಕ್, ಪದವಿ, ಎಂಬಿಎ.
ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮ ಪಾಸ್.
ಟ್ರೇಡ್ ಅಪ್ರೆಂಟಿಸ್ : ವಿವಿಧ ಟ್ರೇಡ್ಗಳಲ್ಲಿ ಐಟಿಐ ಪಾಸ್.
ಮಾಸಿಕ ಸ್ಟೈಫಂಡ್ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ : 10,000
ಡಿಪ್ಲೊಮ (ಟೆಕ್ನೀಷಿಯನ್) ಅಪ್ರೆಂಟಿಸ್ : 8000
ಐಟಿಐ ಅಪ್ರೆಂಟಿಸ್ : 7000
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹತ್ತನೇ ತರಗತಿ, ಐಟಿಐ, ಡಿಪ್ಲೊಮ, ಬಿಇ / ಬಿ.ಟೆಕ್ / ಎಂಬಿಎ ಪದವಿಗಳಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ನಿಗದಿಯಾಗಿದೆ. ಗರಿಷ್ಠ 30 ವರ್ಷ ಮೀರಿರಬಾರದು ಎಂದು ಸೂಚಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಪ್ಲಿಕೇಶನ್ ಶುಲ್ಕ 100. ರೂ. ಪಾವತಿಸಬೇಕುಈ.
ಹುದ್ದೆಗೆ ಈಗಾಗಲೇ ಅರ್ಜಿ ಸಲ್ಲಿಗೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜ.7 ಕೊನೆಯ ದಿನ. ಹುದ್ದೆ ಕುರಿತು ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್ ಸೈಟ್ https://sjvn.nic.in/ಗೆ ಭೇಟಿ ನೀಡಿ.