ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಶ್ಚಿತ ಉಳಿತಾಯ ಠೇವಣಿಗಳ (FD) ಮೇಲಿನ ಬಡ್ಡಿದವರನ್ನು ಹೆಚ್ಚಳ ಮಾಡಿದೆ.
ಬಡ್ಡಿ ದರ ಎಷ್ಟು ಹೆಚ್ಚಳ..? (Interest Rate On FD Savings)
7ರಿಂದ 45 ದಿನಗಳವರೆಗಿನ ಠೇವಣಿ ಮೇಲಿನ ಬಡ್ಡಿಯನ್ನು ಶೇಕಡಾ 0.5ರಷ್ಟು ಹೆಚ್ಚಿಸಲಾಗಿದೆ. ಶೇಕಡಾ 3ರಿಂದ ಶೇಕಡಾ 3.5ಕ್ಕೆ ಏರಿಕೆ ಮಾಡಲಾಗಿದೆ.
46 ದಿನಗಳಿಂದ 179 ದಿನಗಳವರೆಗಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 4.5ರಿಂದ ಶೇಕಡಾ 4.75ಕ್ಕೆ ಅಂದರೆ ಶೇಕಡಾ 0.25ರಷ್ಟು ಹೆಚ್ಚಳ ಮಾಡಲಾಗಿದೆ.
180ರಿಂದ 210 ದಿನಗಳವರೆಗಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 5.25ರಿಂದ ಶೇಕಡಾ 5.75ಕ್ಕೆ ಅಂದರೆ ಶೇಕಡಾ 0.50ಯಷ್ಟು ಏರಿಕೆ ಮಾಡಲಾಗಿದೆ.
211ರಿಂದ 1 ವರ್ಷದವರೆಗಿನ, 2 ವರ್ಷದಿಂದ 3 ವರ್ಷದವರೆಗಿನ, 3 ವರ್ಷದಿಂದ 5 ವರ್ಷದವರೆಗಿನ ಮತ್ತು 5 ವರ್ಷದಿಂದ 10 ವರ್ಷದವರೆಗಿನ ಠೇವಣಿ ಮೇಲಿನ ಬಡ್ಡಿ ದರದಲ್ಲಿ ಬದಲಾವಣೆ ಮಾಡಿಲ್ಲ.
ADVERTISEMENT
ADVERTISEMENT