ಹಿಂದೂ ಧರ್ಮಿಯರ ಹಬ್ಬಗಳಿಗೆ ರಜೆ ಕಡಿತಗೊಳಿಸಲಾಗಿದೆ ಎಂದು ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
೨೦೨೪ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಬಿಹಾರ ಶಿಕ್ಷಣ ಇಲಾಖೆ ರಜಾ ದಿನದ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆ ಪ್ರಕಾರ ಮುಸಲ್ಮಾನರ ಹಬ್ಬಗಳಿಗೆ ಮೂರು ದಿನ ರಜೆ ನೀಡಲಾಗಿದೆ ( ಈ ಹಿಂದೆ ೨ ದಿನ ರಜೆ ನೀಡಲಾಗಿತ್ತು), ಹಿಂದೂಗಳ ಹಬ್ಬಗಳಿಗೆ ಮೂರು ದಿನ ರಜೆ ನೀಡಲಾಗಿದೆ ( ಈ ಹಿಂದೆ ೬ ದಿನ ರಜೆ ನೀಡಲಾಗಿತ್ತು).
ಈ ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ರಾಮನವಮಿ, ಜನ್ಮಾಷ್ಟಮಿ, ಶಿವರಾತ್ರಿ, ಜಾನಕಿ ನವಮಿ, ರಕ್ಷಾಬಂಧನ, ತೀಜ್, ಚಿತ್ರಗುಪ್ತ ಪೂಜೆ ಮತ್ತು ಭೈಯ್ಯಾ ದೂಜ್ಗೆ ರಜೆ ನೀಡಿಲ್ಲ.
ಗಾಂಧಿ ಜಯಂತಿ ಮತ್ತು ಅಂಬೇಡ್ಕರ್ ಜಯಂತಿ ರಜೆ ಬದಲು ಶಾಲೆಗಳಲ್ಲಿ ಜಯಂತಿ ಆಚರಣೆಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ವರ್ಷದಲ್ಲಿ ಕನಿಷ್ಠ ೨೨೦ ದಿನ ತರಗತಿ ನಡೆಸುವುದು ಕಡ್ಡಾಯವಾಗಿದೆ.
ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷಾ ಸಂಘದ ಅಧ್ಯಕ್ಷ ಅಮಿತ್ ವಿಕ್ರಮ್ ಅವರ ಪ್ರಕಾರ ೨೦೨೩ರಲ್ಲಿ ರಜಾ ದಿನಗಳ ಸಂಖ್ಯೆಯಲ್ಲಿ ಬದಲಾವಣೆ ಇಲ್ಲ, ೬೦ ದಿನ ರಜಾ ದಿನಗಳಿರಲಿವೆ. ಆದರೆ ಹಿಂದೂಗಳ ಕೆಲವು ಹಬ್ಬಗಳಿಗೆ ರಜೆ ನೀಡದೇ ಬದಲಾವಣೆ ಮಾಡಿದ್ದಾರೆ.
ಹಿಂದೂಗಳ ಹಬ್ಬಗಳಿಗೆ ರಜೆ ಕಡಿತದ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಮುಸಲ್ಮಾನರ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.