ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ನ ಡಿಪಾರ್ಟ್ಮೆಂಟ್ ಆಫ್ ಪಿಜಿ ಸ್ಟಡೀಸ್ ಇನ್ ಸೋಶಿಯಲ್ ವರ್ಕ್ ಸಿನರ್ಜಿ ವತಿಯಿಂದ ಕಾಮಿಡಿ ಬೀಟ್ಸ್ ಕಾರ್ಯಕ್ರಮ ಕಾಲೇಂಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಅನಿಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಮನೋರಂಜನಾ ಆಟಗಳನ್ನು ಆಡಿಸಿ ನಗೆಯ ಕಡಲಲಿ ತೇಲಿಸಿದ್ದರು.
ಉಪನ್ಯಾಸಕಅತುಲ್ ಸೇಮಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಚಿತ್ರ ಬಿ.ಸಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶರ್ವಾಣಿ ಸ್ವಾಗತಿಸಿದರು. ಮಾನಸ್ ನಿರೂಪಿಸಿದರು. ವಸಂತ್ ಹೆಗ್ಡೆ ವಂದಿಸಿದರು.