ಕಾರಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವ ಸವಾರರೂ ಸೀಟ್ಬೆಲ್ಟನ್ನು ಕಡ್ಡಾಯವಾಗಿ (Seatbelt Compulsary) ಧರಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಲು ನಿರ್ಧರಿಸಿದೆ.
ಈ ಸಂಬಂಧ ಇನ್ನು ಮೂರು ದಿನಗಳಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅಧಿಸೂಚನೆ ಹೊರಡಿಸಲಿದ್ದಾರೆ.
ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಧಿಸೂಚನೆಯ ಬಳಿಕವಷ್ಟೇ ದಂಡದ ಪ್ರಮಾಣವೆಷ್ಟು ಎನ್ನುವುದರ ಬಗ್ಗೆ ತಿಳಿದುಬರಲಿದೆ. ಇದನ್ನೂ ಓದಿ : BIG BREAKING: ಅಪಘಾತದಲ್ಲಿ TATA Sons ಮಾಜಿ ಮುಖ್ಯಸ್ಥ, ಉದ್ಯಮಿ ಸೈರಸ್ ಮಿಸ್ತ್ರಿ ಸಾವು
ಇನ್ನು, ನಿನ್ನೆ ಸೋಮವಾರವಷ್ಟೇ ಡಾಡಾ ಸನ್ಸ್ ಸಂಸ್ಥೆಯ ಚೇರ್ಮನ್ ಆಗಿದ್ದ ಸೈರಸ್ ಮಿಸ್ತ್ರಿಯವರು ಗುಜರಾತ್ನ ಉದ್ವಾಡದಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುವ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಕಾರಿನ ಹಿಂಬದಿಯಲ್ಲಿ ಕೂತಿದ್ದ ಇವರು ಸೀಟ್ ಬೆಲ್ಟ್ ಧರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕಾರಿನ ಹಿಂಬದಿಯಲ್ಲಿ ಪ್ರಯಾಣಿಸುವವರಿಗೂ ಸೀಟ್ ಬೆಲ್ಟ್ ಕಡ್ಡಾಯ (Seatbelt Compulsary) ಎಂಬ ಆದೇಶ ಹೊರಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು