ಹೈದ್ರಾಬಾದ್ನಲ್ಲಿ ಜ್ಯೂಬಿಲ್ ಹಿಲ್ಸ್ನಲ್ಲಿ ಅಪ್ರಾಪ್ತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸ್ಥಳೀಯ ನಾಯಕರೊಬ್ಬರ ಅಪ್ರಾಪ್ತ ಪುತ್ರನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಮೊದಲ ಆರೋಪಿ ಸದುದ್ದಿನ್ ಮಲಿಕ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಇದೀಗ ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.
ಇದೇ ಮೇ 28 ರಂದು ಹೈದ್ರಾಬಾದ್ನ ಜ್ಯೂಬಿಲಿ ಹಿಲ್ಸ್ನಿಂದ ತಡರಾತ್ರಿ 17 ವರ್ಷದ ಯುವತಿ ಪಾರ್ಟಿ ಮುಗಿಸಿ ಮನೆಗೆ ಹೊರಡುವ ವೇಳೆ 5 ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಈಗಾಗಲೇ ಪೊಲೀಸರು 5 ಜನರ ಆರೋಪಿಗಳ ಗುರುತನ್ನು ಸಿಸಿಟಿವಿ ಹಾಗೂ ಬಂಧಿತರ ಹೇಳಿಕೆ ಆಧಾರದ ಮೇಲೆ ಪತ್ತೆ ಹಚ್ಚಿದ್ದಾರೆ.
ಪಬ್ನ ಹೊರಗಡೆ 5 ಜನ ಆರೋಪಿಗಳೊಂದಿಗೆ ನಿಂತಿರುವ ವೀಡಿಯೋ ಪಬ್ನ ಭದ್ರತಾ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮನೆಗೆ ಡ್ರಾಪ್ ಕೊಡುವುದಾಗಿ ಯುವತಿಯನ್ನು ಕಾರ್ನೊಳಗೆ ಹತ್ತಿಸಿಕೊಂಡಿದ್ದ ಯುವಕರು. ಕಾರನ್ನು ನಿರ್ಜನ ಪ್ರದೇಶದಲ್ಲಿ ಪಾರ್ಕ್ ಮಾಡಿ ಸರದಿಯಂತೆ ಅತ್ಯಾಚಾರ ಮಾಡಿದ್ದಾರೆ. ಈ ವಳೆ ಇತರರು ಕಾರಿನ ಹೊರಗಡೆ ಕಾವಲು ಕಾಯ್ದಿದ್ದಾರೆ.
ಆಡಳಿತ ಟಿಆರ್ಎಸ್ ಪಕ್ಷ ಕಾರ್ಯಕಾರಿ ಅಧ್ಯಕ್ಷ ಹಾಗೂ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು, ಗೃಹ ಸಚಿವ, ತೆಲಂಗಾಣ ಪೊಲೀಸ್ ಮಹಾನಿರ್ದೇಶಕರಿಗೆ ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿಕೊಂಡಿದ್ದರು.