ಬಾಲಿವುಡ್ (Bollywood)ಯಂಗ್ ಹೀರೋಯಿನ್ ಅನನ್ಯ ಪಾಂಡೆ (Ananya Panday) ಲೈಗರ್ ಮೂಲಕ ಟಾಲಿವುಡ್ಗೆ (Tollywood)ಎಂಟ್ರಿ ಕೊಟ್ಟಿದ್ದಾರೆ.
ಪುರಿ ಜಗನ್ನಾಥ್ (Puri Jagannath)ನಿರ್ದೇಶನದ , ವಿಜಯ್ ದೇವರಕೊಂಡ (Vijay Devarakonda) ನಟನೆಯ ಲೈಗರ್ನಲ್ಲಿ ಅನನ್ಯ ಪಾಂಡೆಯೇ ನಾಯಕಿ.
ಸಿನಿಮಾ ಪ್ರಮೋಷನ್ ಭಾಗವಾಗಿ ಕಳೆದ 34 ದಿನಗಳಲ್ಲಿ 17 ನಗರಗಳಿಗೆ 20 ವಿಮಾನಗಳಲ್ಲಿ ಸುತ್ತಿದ್ದಾರೆ.
ಅರ್ಜುನ್ ರೆಡ್ಡಿ (Arjun Reddy)ಸಿನಿಮಾ ನೋಡಿ ವಿಜಯ್ ದೇವರಕೊಂಡ ನಟನೆಗೆ ಅನನ್ಯ ಪಾಂಡೆ ಫಿದಾ ಆಗಿದ್ದರಂತೆ.
ವಿಜಯ್ ದೇವರಕೊಂಡ ಜೊತೆ ನಟಿಸಲು, ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟ ಎನ್ನುತ್ತಾರೆ ಅನನ್ಯ ಪಾಂಡೆ.
ಅನನ್ಯ ಪಾಂಡೆ ತಂದೆ ಚುಂಕಿ ಪಾಂಡೆ (Chunki Pandey)ಬಾಲಿವುಡ್ನ ಪ್ರಮುಖ ನಟರಲ್ಲಿ ಒಬ್ಬರು. ಹೀಗಾಗಿ ಬಾಲ್ಯದಿಂದಲೇ ಬಾಲಿವುಡ್ ನಂಟು.
ಹೀರೋಯಿನ್ ಆಗಬೇಕೆಂದು ಚಿಕ್ಕ ವಯಸ್ಸಿನಲ್ಲಿಯೇ ಅನನ್ಯ ಪಾಂಡೆ ನಿರ್ಧರಿಸಿದ್ದರಂತೆ.
2019ರಲ್ಲಿ ಕರಣ್ ಜೋಹರ್ (Karan Johar ) ನಿರ್ಮಿಸಿದ ಸ್ಟುಡೆಂಟ್ ಆಫ್ ದಿ ಇಯರ್-2 (Student of the year 2)ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ.
ಮೊದಲ ಚಿತ್ರದ ನಟನೆಗಾಗಿ ಫಿಲ್ಮ್ಫೇರ್,(FilmFare) ಐಫಾ(IIFA)ಸೇರಿ ಹಲವು ಪ್ರಶಸ್ತಿ ಪಡೆದಿದ್ದ ಅನನ್ಯ ಪಾಂಡೆ.
ಪತಿ, ಪತ್ನಿ ಔರ್ ವೋ.. ಖಾಲಿಪೀಲಿ ಚಿತ್ರದ ನಟನೆಗಾಗಿಯೂ ಮೆಚ್ಚುಗೆ ಪಡೆದಿದ್ದ ಅನನ್ಯ ಪಾಂಡೆ.
ಗೆಹ್ರೋಹಿಯಾ ಚಿತ್ರದಲ್ಲಿ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದರು.
ಒಂದು ಹಂತದಲ್ಲಿ ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಲು ಬಯಸಿದ್ದರು.
ಅದೇ ಸಂದರ್ಭದಲ್ಲಿ ಸ್ಟುಡೆಂಟ್ ಆಫ್ ದಿ ಇಯರ್-2 ಚಿತ್ರದಲ್ಲಿ ನಟಿಸಲು ಆಫರ್.. ಚಿತ್ರೋದ್ಯಮಕ್ಕೆ ಎಂಟ್ರಿ.
ಅನನ್ಯ ಪಾಂಡೆಗೆ ಚಿಕ್ಕಂದಿನಿಂದಲೂ ಹೃತಿಕ್ ರೋಷನ್ (Hritik Roshan l)ಅಂದ್ರೆ ತುಂಬಾ ಇಷ್ಟ.. ಆದರೆ, ವರುಣ್ ಧವನ್ (Varun Dhavan )ಜೊತೆ ನಟಿಸಲು ಹೆಚ್ಚು ಇಷ್ಟವಂತೆ..
ಕುಚ್ ಕುಚ್ ಹೋತಾ ಹೈನಂತಹ ಚಿತ್ರಗಳಲ್ಲಿ ನಟಿಸಲು ತನಗೆ ಇಷ್ಟ ಎನ್ನುತ್ತಾರೆ.
ಶಾರೂಖ್ ಖಾನ್ (Sharukh khan)ನಟನೆಯ ಲವ್ ಸ್ಟೋರಿ (Love story)ಸಿನಿಮಾಗಳೆಂದರೇ ಅನನ್ಯಗೆ ಪ್ರಾಣ.. ಶಾರೂಖ್ ಚಿತ್ರಗಳ ಹೀರೋ ಕ್ವಾಲಿಟಿ ಇರುವ ಗಂಡ ಸಿಗಬೇಕು ಎಂಬ ಬಯಕೆಯನ್ನು ಅನನ್ಯ ಪಾಂಡೆ ತೆರೆದಿಟ್ಟಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಅನನ್ಯ ಪಾಂಡೆ ಫುಲ್ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 23.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.