2016ರಲ್ಲಿ ಬೇನಾಮಿ ಕಾಯ್ದೆಯನ್ನು ಪೂರ್ವಾನ್ವಯದಿಂದ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಈ ಮೂಲಕ 2016ರ ಬಳಿಕದ ಅಂದರೆ ಕಾಯ್ದೆ ಜಾರಿ ಆದ ಬಳಿಕದ ಅಪರಾಧ ಮತ್ತು ದಾಖಲಾದ ಪ್ರಕರಣಗಳಿಗಷ್ಟೇ ಬೇನಾಮಿ ಕಾಯ್ದೆಯನ್ನು ಅನ್ವಯಿಸಲು ಸಾಧ್ಯ.
ಬೇನಾಮಿ ವರ್ಗಾವಣೆ ನಿಷೇಧ ಕಾಯ್ದೆ – 2016ರ ಸೆಕ್ಷನ್ 3ನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಮತ್ತು 20(1)ರಡಿಯಲ್ಲಿ ಕೊಡಮಾಡಲಾದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿದೆ.
ಸಂವಿಧಾನದ 20(1) ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಆತ ಕೃತ್ಯ ಎಸಗಿದ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನಿನ ಆಧಾರದಲ್ಲಷ್ಟೇ ಶಿಕ್ಷೆ ನೀಡಬಹುದೇ ಹೊರತು ಆ ಬಳಿಕ ಜಾರಿ ಆಗುವ ಕಾನೂನುಗಳನ್ನು ಕೃತ್ಯ ಸಂಬಂಧ ಶಿಕ್ಷಿಸುವ ವೇಳೆ ಪೂರ್ವಾನ್ವಯಗೊಳಿಸುವಂತಿಲ್ಲ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ಪೀಠ ಐತಿಹಾಸಿಕ ತೀರ್ಪು ನೀಡಿದೆ.
2016ರಲ್ಲಿ ತಿದ್ದುಪಡಿ ಆದ ಬೇನಾಮಿ ಕಾಯ್ದೆ ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ADVERTISEMENT
ADVERTISEMENT