ಕನ್ನಡದ ಹಿರಿಯ ನಟ ಅಶ್ವಥ್ ನಾರಾಯಣ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ವೃದ್ದಾಶ್ರಮದಲ್ಲಿ ವಾಸವಿದ್ದ ಅವರು ಇಂದು ನಿಧನರಾಗಿದ್ದಾರೆ.
1962 ರಲ್ಲಿ ಡಾ.ರಾಜ್ ಕುಮಾರ್ ಹಾಗೂ ಲೀಲಾವತಿ ನಟನೆಯ ‘ಮನ ಮೆಚ್ಚಿದ ಮಡದಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಇವರು ಎಂಟ್ರಿ ಕೊಟ್ಟಿದ್ದರು. 2012 ರಲ್ಲಿ ಲೂಸ್ ಮಾದ ನಟನೆಯ ಅಲೆಮಾರಿ ಚಿತ್ರದಲ್ಲಿ ಕೊನೆಯ ಬಾರಿ ಬಣ್ಣ ಹಚ್ಚಿದ್ದರು.
ಡಾ.ರಾಜ್ಕುಮಾರ್ ಅವರ ತಂದೆ ಪುಟ್ಟಸ್ವಾಮಿಯವರೊಂದಿಗೂ ಇವರು ನಟಿಸಿದ್ದರು. ಹಾಗೆಯೇ, ಡಾ.ರಾಜ್ಕುಮಾರ್ ಹಾಗೂ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರರಾಜ್ಕುಮಾರ್ ಅವರೊಂದಿಗೂ ನಟಿಸಿದ್ದಾರೆ. ಆ ಮೂಲಕ ಒಂದೇ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸಿದ ಕೀರ್ತಿ ಇವರಿಗಿದೆ.
300 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಇವರಿಗೆ ಅತ್ಯತ್ತಮ ಪೋಷಕ ನಟನ ಎಂಬ ಖ್ಯಾತಿಯೂ ಇದೆ.
ಕನ್ನಡದ ಹಲವು ದಿಗ್ಗಜ ನಟರೊಂದಿಗೆ ನಟಿಸಿದ್ದ ಹಿರಿಯ ನಟ
"ಶ್ರೀ ಅಶ್ವಥ್ ನಾರಾಯಣ್" ಅವರು ಇಂದು ವೃದ್ಧಾಶ್ರಮದಲ್ಲಿ ವಿಧಿವಶ 😢#ಕನ್ನಡ_ಕರುನಾಡು pic.twitter.com/sAq4zKz0Xt— ಕರ್ನಾಟಕ ಇತಿಹಾಸ (@KannadaNaduu) February 6, 2022
ಕಳೆದ ವರ್ಷ ಹಿರಿಯ ನಟ ಅಶ್ವಥ್ ನಾರಾಯಣ್ ಅವರು, ತಮ್ಮ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅನಂತರ ಹಲವು ಜನ ಇವರ ನೆರಚಿಗೆ ಬಂದಿದ್ದರು. ಅನಂತರ, ಇವರು ವೃದ್ದಾಶ್ರಮದಲ್ಲಿ ವಾಸವಿದ್ದರು. ಇದೀಗ, ವೃದ್ದಾಶ್ರಮದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕನ್ನಡದ ಚಿತ್ರರಂಗದ ಪ್ರಮುಖರು ಸಾವನ್ನಪ್ಪಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟರಾದ ಸಂಚಾರಿ ವಿಜಯ್, ಪುನೀತ್ ರಾಜ್ಕುಮಾರ್ ಸೇರಿದಂತೆ ಹಿರಿಯ ನಟ ಶಿವರಾಂ, ನಿರ್ಮಾಪಕ ರಾಮು ಸೇರಿದಂತೆ ಹಲವು ಕನ್ನಡ ಚಿತ್ರರಂಗವನ್ನು ಬಿಟ್ಟು ತೆರಳಿದ್ದಾರೆ. ಇದೀಗ ಈ ಸಾಲಿಗೆ ಹಿರಿಯ ನಟ ಅಶ್ವಥ್ ನಾರಾಯಣ ಅವರು ಸೇರಿದ್ದಾರೆ.