ಬಿಬಿಎಂಪಿ ಎಂಜಿನಿಯರ್ಗಳ ಬಡ್ತಿಗೆ 4.5 ಕೋಟಿ ಲಂಚ ಆರೋಪ ಹೊತ್ತಿದ್ದ ಎಲಿಷಾ ಆಂಡ್ರೂಸ್ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿಯಾಗಿ-3 ದರ್ಜೆಯ ಅಧಿಕಾರಿಯಾಗಿ ಎಲಿಷಾ ಆಂಡ್ರೂಸ್ ಅವರು ಕಾರ್ಯನಿರ್ವಹಿಸುತ್ತಿದ್ದರು.
ಎಲಿಷಾ ಆಂಡ್ರೂಸ್ ಅವರನ್ನು ದುರ್ನಡತೆ ಮತ್ತು ಕರ್ತವ್ಯ ಲೋಪದ ಹಿನ್ನೆಲೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತಾಗಿರುವ ಎಲಿಷಾ ಆಂಡ್ರೂಸ್ ಅವರು ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿದ್ದಾರೆ.