ADVERTISEMENT
ಹೊಸ ವರ್ಷ ಸತತ ಎರಡನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಗೂಳಿಯಬ್ಬರಿಸಿದೆ. ಜನವರಿ 2 ಅಂದರೆ ಇವತ್ತು ಷೇರು ಮಾರುಕಟ್ಟೆ ಶೇಕಡಾ 1.5ರಷ್ಟು ಭಾರೀ ಹೆಚ್ಚಳ ಕಂಡಿದೆ.
ಮುಂಬೈ ಷೇರು ಮಾರುಕಟ್ಟೆ 1,400 ಅಂಕಗಳಷ್ಟು ಏರಿಕೆ ಕಂಡಿದೆ. ನಿಫ್ಟಿ 445 ಅಂಕಗಳಷ್ಟು ಏರಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ 544 ಅಂಕಗಳಷ್ಟು ಮತ್ತು ನಿಫ್ಟಿ ಮಿಡ್ಕ್ಯಾಪ್ 647 ಅಂಕಗಳಷ್ಟು ಭಾರೀ ಏರಿಕೆ ಆಗಿದೆ.
ಬಿಎಸ್ಇ ಇವತ್ತು 79,943 ಸೂಚ್ಯಂಕದೊಂದಿಗೆ ವ್ಯವಹಾರ ಮುಗಿಸಿದರೆ, ನಿಫ್ಟಿ ಬ್ಯಾಂಕ್ 51,605 ಅಂಕಗಳಷ್ಟು, ನಿಫ್ಟಿ ಮಿಡ್ಕ್ಯಾಪ್ 58,108 ಸೂಚ್ಯಂಕದೊಂದಿಗೆ ಮತ್ತು ನಿಫ್ಟಿ 24,188 ಅಂಕಗಳೊಂದಿಗೆ ದಿನದ ವ್ಯವಹಾರ ಮುಗಿಸಿದೆ.
ಬಜಾಜ್ ಫೈನ್ಯಾನ್ಸ್, ರಿಲಯನ್ಸ್, ಮಾರುತಿ ಸುಜುಕಿ, ಹೆಚ್ಡಿಎಫ್ಸಿ ಮತ್ತು ಏಚಾರ್ ಮೋಟಾರ್ಸ್ ಷೇರುಗಳ ಮೌಲ್ಯ ಭಾರೀ ಏರಿಕೆ ಕಂಡಿದೆ.
ADVERTISEMENT