ADVERTISEMENT
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮಿಳುನಾಡು ಸರ್ಕಾರದ ಇಂಧನ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದೆ.
ಚೆನ್ನೈನಲ್ಲಿರುವ ಸೆಂಥಿಲ್ ಅವರ ನಿವಾಸದಲ್ಲಿ 18 ಗಂಟೆಗಳ ಸುದೀರ್ಘ ವಿಚಾರಣೆಯ ಬಳಿಕ ಈಡಿ ಬಂಧಿಸಿದೆ.
ಇವತ್ತು ಮಧ್ಯರಾತ್ರಿ 2 ಗಂಟೆಗೆ ಈಡಿ ಸೆಂಥಿಲ್ ಅವರನ್ನು ಬಂಧಿಸಿತು.
ಬಂಧನವಾಗುತ್ತಿದ್ದಂತೆ ಕುಸಿದು ಬಿದ್ದ ಸೆಂಥಿಲ್ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಬಹು ಸೌಲಭ್ಯ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
2011ರಿಂದ 2016ರ ಅವಧಿಯಲ್ಲಿ ಎಐಡಿಎಂಕೆ ಸರ್ಕಾರದಲ್ಲಿ ಸೆಂಥಿಲ್ ಅವರು ಸಾರಿಗೆ ಸಚಿವರಾಗಿದ್ದರು. ಈ ವೇಳೆ ಇಲಾಖೆಯಲ್ಲಿ ನೇಮಕಾತಿಯಲ್ಲಿ ನಡೆದಿದ್ದ ಭ್ರಷ್ಟಾಚಾರ ಸಂಬಂಧ 2021ರ ಮಾರ್ಚ್ನಲ್ಲಿ ಚೆನ್ನೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. 2014-15ರ ಅವಧಿಯಲ್ಲಿ ನಡೆದಿದ್ದ ನೇಮಕಾತಿ ಹಗರಣ ಸಂಬಂಧ ಪೊಲೀಸರು ಸಚಿವ ಸೆಂಥಿಲ್ ಮತ್ತು ಇತರೆ ಅಧಿಕಾರಿಗಳು ಸೇರಿದಂತೆ ಒಟ್ಟು 46 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್ ಈಡಿಗೆ ವಿಚಾರಣೆ ನಡೆಸಲು ಅನುಮತಿ ನೀಡಿತ್ತು.
ADVERTISEMENT