ಇತ್ತೀಷೆಗಷ್ಟೇ ಧಾರವಾಡದ ಬಾಡ ಕ್ರಾಸ್ನಲ್ಲಿ ನಡೆದ ಅಪಘಾತ ಪ್ರಕರಣ ಮಾಸುವ ಮುನ್ನವೇ, ಇದೀಗ ಹುಬ್ಬಳ್ಳಿ ಹೊರವಲಯದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ.
ಹುಬ್ಬಳ್ಳಿ ಹೊರವಲಯದ ತಾರಿಹಾಳ ಬೈಪಾಸ್ನ ಧಾರಾವತಿ ದೇವಸ್ಥಅನದ ಬಳ ಸೋಮವಾರ ರಾತ್ರಿ 1.30 ರ ವೇಳೆಗೆ ಸರಣಿ ಅಪಘಾತ ನಡೆದಿದ್ದು, 8 ಜನ ಸಾವನ್ನಪ್ಪಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಬಂದ ಲಾರಿ ಬಸ್ಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ನ್ಯಾಷನಲ್ ಟ್ರಾವೆಲ್ಸ್ ಟೂರಿಸ್ಟ್ ಬಸ್ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಕಿಮ್ಸ್ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಪೈಕಿ ನಾಲ್ವರನ್ನು ಬಸ್ ಚಾಲಕರಾದ ಅತಾವುಲ್ಲಾ ಹಾಗೂ ನಾಗರಾಜ, ಚಿಕ್ಕೋಡಿಯ ಬಾಬುಸಾಹೇಬ್ (55), ಮೈಸೂರು ಮೂಲದ ಮಹ್ಮದ್ ದಯ್ಯಾನ್ (17) ಎಂದು ಗುರುತಿಸಲಾಗಿದೆ. ಇನ್ನುಳಿದವರ ಹೆಸರು ತಿಳಿದುಬರಬೇಕಿದೆ.
ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. 20 ಮಂದಿ ಕಿಮ್ಸ್ನಲ್ಲಿ ದಾಖಲಾಗಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.