ಭಾಷಣ, ಮಾಧ್ಯಮಗೋಷ್ಠಿ ವೇಳೆ ಆವೇಶದ ಭಾಷಣದಲ್ಲಿ ಮೈಕ್ಗಳನ್ನು ತಳ್ಳುವ ಅಭ್ಯಾಸ ಇರುವ ಶೆಹಾಬಾಜ್ ಷರೀಫ್ ಪಾಕಿಸ್ತಾನದ ಹೊಸ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಅವಿಶ್ವಾಸ ನಿರ್ಣಯದ ಎದುರು ಇಮ್ರಾನ್ ಖಾನ್ ಪದಚ್ಯುತಗೊಳಿಸಿರುವ ವಿರೋಧ ಪಕ್ಷಗಳು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ 70 ವರ್ಷದ ಶಹಬಾಜ್ ಷರೀಫ್ ಅವರಿಗೆ ಪಾಕಿಸ್ತಾನದ ಆಡಳಿತದ ಚುಕ್ಕಾಣಿ ವಹಿಸಿಕೊಟ್ಟಿವೆ.
ಶೆಹಬಾಜ್ ಷರೀಫ್ ಮತ್ತು ಅವರ ಮಗ ಹಮ್ಜಾ ಶೆಹಬಾಜ್ ಮತ್ತು ಸುಲೇಮಾನ್ ಶೆಹಬಾಜ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣವಿದ್ದು, ಇವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಪಾಕಿಸ್ತಾನದ ಕೋರ್ಟ್ ಏಪ್ರಿಲ್ 27ರವರೆಗೆ ಮುಂದೂಡಿದೆ.