ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಗ ಬಿ ವೈ ವಿಜಯೇಂದ್ರ ವೈಯಕ್ತಿಕವಾಗಿ ಸವಾಲಾಗಿ ತೆಗೆದುಕೊಂಡಿರುವ ಕ್ಷೇತ್ರ ಅದು ಹುಬ್ಬಳ್ಳಿ ಸೆಂಟ್ರಲ್. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್.
ಜಾತಿ ಲೆಕ್ಕಾಚಾರ:
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಲಿಂಗಾಯತ- 71,000, ಮುಸ್ಲಿಂ- 43,000, ಎಸ್ಸಿ/ಎಸ್ಟಿ- 32,000, ಕ್ರೈಸ್ತರು- 26,500, ಮರಾಠಾ- 22,700, ಬ್ರಾಹ್ಮಣ- 22,000 ಹಾಗೂ ಇತರೆ- 25,000 ಮತದಾರರಿದ್ದಾರೆ.
ಯಾರು ಗೆಲ್ಲಬಹುದು..?
ಬಿಜೆಪಿ ಟಿಕೆಟ್ ನಿರಾಕರಿಸಿದ್ದ ಕಾರಣ ಕೊನೆ ಕ್ಷಣದಲ್ಲಿ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬಂದು ಅಖಾಡಕ್ಕಿಳಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಪ್ತ ಮಹೇಶ್ ತೆಂಗಿನಕಾಯಿಗೆ ಬಿಜೆಪಿ ಟಿಕೆಟ್ ನೀಡಿದೆ.
ನಮಗೆ ಲಭ್ಯ ಇರುವ ಮಾಹಿತಿ ಪ್ರಕಾರ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರೇ ಗೆಲ್ಲಲಿದ್ದಾರೆ. ಬಿಜೆಪಿಗೆ ಮುಖಭಂಗವಾಗಲಿದೆ.
ಲಿಂಗಾಯತ ಮತಗಳ ಪೈಕಿ ಶೆಟ್ಟರ್ ಅವರ ಸಮುದಾಯದ ಬಣಜಿಗ ಲಿಂಗಾಯತ ಮತಗಳು 12,500ರಷ್ಟಿವೆ.
ಕಾರಣಗಳು:
1. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ
2. ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳು
3. ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪಂಚಮಸಾಲಿ ಸಮುದಾಯದ ಸಿಟ್ಟು
4. ಲಿಂಗಾಯತ ಸಮುದಾಯವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ತುಳಿಯುತ್ತಿದ್ದಾರೆ ಎಂಬ ಸಿಟ್ಟು
5. ಲಿಂಗಾಯತ ನಾಯಕ ಶೆಟ್ಟರ್ಗೆ ಟಿಕೆಟ್ ಕೊಡದೇ ಬಿಜೆಪಿ ಅವಮಾನ ಮಾಡಿದ್ದು ಮತ್ತು ಇದು ಸ್ವಾಭಿಮಾನದ ಚುನಾವಣೆ ಎಂಬ ಶೆಟ್ಟರ್ ಘೋಷಣೆ
6. ಶೆಟ್ಟರ್ ಕಾಂಗ್ರೆಸ್ಗೆ ಬಂದಿದ್ದರಿಂದ ಮುಸಲ್ಮಾನ, ದಲಿತ ಮತ್ತು ಕ್ರಿಶ್ಚಿಯನ್ ಸಮುದಾಯದ ಮತಗಳು ಶೆಟ್ಟರ್ಗೆ ಕ್ರೋಢೀಕರಣ ಆಗುವ ನಿರೀಕ್ಷೆ
ADVERTISEMENT
ADVERTISEMENT