ಶಿವಮೊಗ್ಗ ನಗರದ ನವಲೆ ಕೆಎಸ್ಸಿಎ ಮೈದಾನದಲ್ಲಿ 19 ವರ್ಷದೊಳಗಿನವರ ಕೂಚ್ ಬೆಹಾರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಇನಿಂಗ್ಸ್ ಮುನ್ನಡೆಯೊಂದಿಗೆ ಮುಂಬೈ ವಿರುದ್ಧ ಜಯಗಳಿಸಿದೆ. ನಾಲ್ಕು ದಿನದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮುಂಬೈ ತಂಡ ಮೊದಲ ಇನಿಂಗ್ಸ್ನಲ್ಲಿ 380 ರನ್ ಗಳಿಗೆ ಅಲೌಟ್ ಆಯಿತು. ನಂತರ ಎರಡನೇ ದಿನಕ್ಕೆ ತನ್ನ ಆಟ ಪ್ರಾರಂಭಿಸಿದ ಕರ್ನಾಟಕ ತಂಡ ಆರಂಭಿಕ ಆಟಗಾರ ಪ್ರಕರ್ ಚರ್ತುವೇದಿ ರವರು 638 ಬಾಲ್ ಗಳಿಗೆ 404 ರನ್ ಗಳಿಸಿ ಅಜೇಯರಾಗಿ ಉಳಿದರು.
ಉಳಿದಂತೆ ಹರ್ಷಿತ್ ರವರು 169 ರನ್ ಗಳಿಸಿದರೆ, ಭಾರತ ತಂಡ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 22 ರನ್ ಗಳಿಸಿದ್ದರು. ಈ ಮೂಲಕ ಕರ್ನಾಟಕ ಇನಿಂಗ್ಸ್ ಮುನ್ನಡೆಯೊಂದಿಗೆ 8 ವಿಕೆಟ್ ಕಳೆದು ಕೊಂಡು 890 ರನ್ ಗಳಿಸಿತು. 404 ರನ್ ಗಳಿಸಿ ಅಜೇಯರಾಗಿ ಉಳಿದ ಪ್ರಕರ್ ಚರ್ತುವೇದಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.