ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ರೈಲನ್ನೇ ನಿಲ್ಲಿಸಿ ಲೋಕೋ ಪೈಲಟ್ (ರೈಲ್ವೆ ಚಾಲಕ) ಮಾನವೀಯತೆ ಮೆರೆದ ಅಪರೂಪದ ಘಟನೆ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ 1.10 ರ ಸುಮಾರಿಗೆ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಪ್ಯಾಸೆಂಜರ್ ರೈಲು ಆಗಮಿಸುತ್ತಿತ್ತು. ಈ ವೇಳೆ ಕಾಶೀಪುರ ರೈಲ್ವೆ ಗೇಟ್ ನ ಸಮೀಪ ಎಮ್ಮೆಗಳ ಹಿಂಡು ಹಳಿಗಳ ಬಳಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್ ದೂರದಲ್ಲಿಯೇ ರೈಲನ್ನು ನಿಲ್ಲಿಸಿದ್ದರು. ಎಮ್ಮೆಗಳು ಹಳಿಯಿಂದ ಬದಿಗೆ ಸರಿದ ನಂತರ, ರೈಲು ಚಾಲನೆಗೊಳಿಸಿದರು.
ಲೊಕೋ ಪೈಲಟ್ನ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ಕೆಲ ಸೆಕೆಂಡ್ ಗಳ ಕಾಲ ರೈಲನ್ನೇ ನಿಲ್ಲಿಸಿ #ಲೋಕೋಪೈಲೈಟ್ ಮಾನವೀಯತೆ ಮೆರೆದ ಅಪರೂಪದ ಘಟನೆ ಶಿವಮೊಗ್ಗದ ಕಾಶೀಪುರ ರೈಲ್ವೆ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆಯಿತು.#Shivamogga : loco pilot saves buffalo life.@RailMinIndia @KARailway @SihimogeRailu #Shimoga pic.twitter.com/3GCv058Zuj
— B. Renukesha (ಬಿ.ರೇಣುಕೇಶ್) Shivamogga (@renukesh9) April 19, 2022