ಶಿವಮೊಗ್ಗದಲ್ಲಿ (Shivamogga) ನಿನ್ನೆ ನಡೆದ ಗಲಾಟೆಯಲ್ಲಿ ಚಾಕು ಇರಿದಿದ್ದ ಶಂಕಿತ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಗಲಾಟೆಯ ಶಂಕಿತ ಆರೋಪಿ ಮೊಹಮ್ಮದ್ ಜಾಬಿ (Mohammed Jabi) ಎಂಬವನ್ನು ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ (Police Firing).
ಈ ವೇಳೆ ಶಂಕಿತ ಆರೋಪಿ ಮೊಹಮ್ಮದ್ ಜಾಬಿ ಕಾಲಿಗೆ ಗುಂಡೇಟು ಆಗಿದೆ.
ನಿನ್ನೆ ಶಿವಮೊಗ್ಗ ನಗರದ ಅಮೀರ್ ಅಹಮದ್ ಸರ್ಕಲ್ನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣದಲ್ಲಿ ಮೊಹಮ್ಮದ್ ಜಾಬಿ ಶಂಕಿತ ಆರೋಪಿಯಾಗಿದ್ದಾರೆ.